Asianet Suvarna News Asianet Suvarna News

ಕೊನೆಯ ದಿನವನ್ನು ನೆಚ್ಚಿನ ಮನೆಯಲ್ಲಿ ಕಳೆಯಲಿಲ್ಲ ಅಂಬಿ!

ಇತ್ತೀ​ಚೆ​ಗಷ್ಟೇ ಅಂಬರೀಶ್ ಜೆಪಿ ನಗ​ರದ ನಿವಾ​ಸದ ದುರಸ್ತಿ ಕಾರ್ಯಕ್ಕೆ ಮುಂದಾ​ಗಿ​ದ್ದರು. ಹೀಗಾಗಿ ಜೆಪಿ ನಗ​ರದ ನಿವಾ​ಸದ ಬದ​ಲಾಗಿ ವಿಂಡ್ಸರ್‌ ಮ್ಯಾನರ್‌ ಬಳಿ ಇರುವ ತಮ್ಮ ಅಪಾ​ರ್ಟ್‌​ಮೆಂಟ್‌ಗೆ ವಾಸ​ಸ್ಥಾ​ನ​ವನ್ನು ಬದ​ಲಾ​ಯಿ​ಸಿ​ಕೊಂಡಿ​ದ್ದರು ಮತ್ತು ಶನಿ​ವಾರ ಈ ಅಪಾ​ರ್ಟ್‌ಮೆಂಟ್‌​ನಲ್ಲೇ ಹೃದಯಾ​ಘಾ​ತ​ದಿಂದ ಕುಸಿದು ಬಿದ್ದು ಅಸು ನೀಗಿದ್ದಾರೆ.

Ambareesh haven't spent his last day in his favourite house at JP Nagar
Author
Bangalore, First Published Nov 25, 2018, 7:39 AM IST

ಬೆಂಗ​ಳೂರು[ನ.25]: ಜೆಪಿ ನಗ​ರದ ನಿವಾ​ಸ ಅಂಬ​ರೀಶ್‌ ಅವರ ಫೆವ​ರೇಟ್‌ ತಾಣ. ದುರಂತ​ವೆಂದರೇ ಅಂಬ​ರೀಶ್‌ ಅವರು ತಮ್ಮ ಅಂತಿ​ಮ ಕ್ಷಣ​ಗಳನ್ನು ತಮ್ಮ ನೆಚ್ಚಿನ ಮನೆ​ಯಲ್ಲಿ ಕಳೆ​ಯಲು ಆಗ​ಲಿ​ಲ್ಲ.

ಏಕೆಂದರೆ, ಇತ್ತೀ​ಚೆ​ಗಷ್ಟೇ ಅವರು ಜೆಪಿ ನಗ​ರದ ನಿವಾ​ಸದ ದುರಸ್ತಿ ಕಾರ್ಯಕ್ಕೆ ಮುಂದಾ​ಗಿ​ದ್ದರು. ಹೀಗಾಗಿ ಜೆಪಿ ನಗ​ರದ ನಿವಾ​ಸದ ಬದ​ಲಾಗಿ ವಿಂಡ್ಸರ್‌ ಮ್ಯಾನರ್‌ ಬಳಿ ಇರುವ ತಮ್ಮ ಅಪಾ​ರ್ಟ್‌​ಮೆಂಟ್‌ಗೆ ವಾಸ​ಸ್ಥಾ​ನ​ವನ್ನು ಬದ​ಲಾ​ಯಿ​ಸಿ​ಕೊಂಡಿ​ದ್ದರು ಮತ್ತು ಶನಿ​ವಾರ ಈ ಅಪಾ​ರ್ಟ್‌ಮೆಂಟ್‌​ನಲ್ಲೇ ಹೃದಯಾ​ಘಾ​ತ​ದಿಂದ ಕುಸಿದು ಬಿದ್ದು ಅಸು ನೀಗಿ​ದ್ದಾರೆ.

ಮನೆ ದಾಖ​ಲೆ ಕಳೆ​ದು​ಕೊಂಡಿದ್ದ ಅಂಬ​ರೀ​ಶ್‌!

ಬಹಳ ವರ್ಷಗಳಿಂದ ಜೆಪಿ ನಗರದ ನಿವಾಸದಲ್ಲಿ ವಾಸಿಸುತ್ತಿದ್ದ ಅಂಬರೀಷ್‌ ಅವರು ತಮ್ಮ ಮನೆಯ ಎಲ್ಲ ದಾಖಲೆಗಳನ್ನು ಕಳೆದುಕೊಂಡಿದ್ದರು. ಇದ​ರಿಂದಾಗಿ ಮನೆ ದುರಸ್ತಿ ಕಾರ್ಯಕ್ಕೆ ಮುಂದಾ​ಗಲು ಅಡ​ಚ​ಣೆ​ಯಾ​ಗಿತ್ತು.

ಹೀಗಾಗಿ, ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಸಚಿ​ವ​ರಾ​ಗಿ​ರುವ ಡಾ. ಜಿ. ಪರ​ಮೇ​ಶ್ವರ್‌ ಅವ​ರಿಗೆ ಇತ್ತೀ​ಚೆಗೆ ದೂರ​ವಾಣಿ ಕರೆ ಮಾಡಿದ ಮೂಲ ದಾಖ​ಲೆ ಪ್ರತಿ ದೊರ​ಕಿ​ಸಿಕೊಡು​ವಂತೆ ಬೆಳಗ್ಗೆ 10ಕ್ಕೆ ಕರೆ ಮಾಡಿ​ದ್ದರು. ಅಂಬರೀಷ್‌ ಮಾಡಿಕೊಂಡ ಮನವಿ ಮೇರೆಗೆ ಪರಮೇಶ್ವರ್‌ ಅವರು ಅಧಿಕಾರಿಗಳಿಗೆ ಸೂಚಿಸಿ ಕೇವಲ ಅಂದೇ ಸಂಜೆ ವೇಳೆಗೆ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟಿದ್ದರು.

ಹೀಗಿತ್ತು ನೋಡಿ ಅಂರೀಶ್ ನೆಚ್ಚಿನ ಮನೆ!
 

Follow Us:
Download App:
  • android
  • ios