ನಟ, ಮಾಜಿ ಸಚಿವ ಅಂಬರೀಷ್ ಅವರ ಪಾರ್ಥೀರ ಶರೀರದ ಅಂತಿಮಯಾತ್ರೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. 

ಬೆಂಗಳೂರು : ನಟ, ಮಾಜಿ ಸಚಿವ ಅಂಬರೀಷ್ ಅವರ ಪಾರ್ಥೀರ ಶರೀರದ ಅಂತಿಮಯಾತ್ರೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. 

* ಹೊರವರ್ತುಲ ರಸ್ತೆ ಸುಮ್ಮನಹಳ್ಳಿ ಜಂಕ್ಷನ್‌ನಿಂದ ಗೊರಗುಂಟೆಪಾಳ್ಯ ಕಡೆಗೆ ಹಾದು ಹೋಗುವ ಭಾರೀ ವಾಹನಗಳು ಮಾಗಡಿರಸ್ತೆ, ಹೌಸಿಂಗ್ ಬೋರ್ಡ್, ಮಾಗಡಿ ರಸ್ತೆ ಟೋಲ್‌ಗೇಟ್ ಮೂಲಕ ಪಶ್ಚಿಮ ಕಾರ್ಡ್ ರಸ್ತೆ ಕಡೆಗೆ ಸಂಚರಿಸಬಹುದು.

* ತುಮಕೂರು ರಸ್ತೆ ಗೊರಗುಂಟೆಪಾಳ್ಯ, ಎಂಇಐ ಜಂಕ್ಷನ್, ಆರ್‌ಎಂಸಿ ಯಾರ್ಡ್, ಮಾರಪ್ಪನಪಾಳ್ಯ, ಸ್ಯಾಂಡಲ್ ಸೋಫ್ ಫ್ಯಾಕ್ಟರಿ ವೃತ್ತ ಮೂಲಕ ಪಶ್ಚಿಮ ಕಾರ್ಡ್ ರಸ್ತೆ ಕಡೆಗೆ ಹಾದು ಹೋಗಬಹುದು.

* ಮೇಖ್ರಿ ವೃತ್ತ-ಸಿ.ವಿ.ರಾಮನ್ ರಸ್ತೆ, ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಬಲತಿರುವು, ಕುವೆಂಪು ವೃತ್ತ ಎಡತಿರುವು ಪಡೆದು ಬಿಇಎಲ್ ವೃತ್ತ ಬಲತಿರುವು, ಗಂಗಮ್ಮ ವೃತ್ತ ಎಡ ತಿರುವುದು ಪಡೆದು ತುಮಕೂರು ರಸ್ತೆ ತಲುಪಬಹುದು.

ಹಡ್ಸನ್ ವೃತ್ತ, ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಸಿಐಡಿ ಜಂಕ್ಷನ್, ಬಸವೇಶ್ವರ ವೃತ್ತ, ಹಳೇ ಹೈಗ್ರೌಂಡ್ಸ್ ಠಾಣೆ ಜಂಕ್ಷನ್, ವಿಂಡ್ಸ್‌ರ್ ಮ್ಯಾನರ್ ಜಂಕ್ಷನ್, ಕಾವೇರಿ ಜಂಕ್ಷನ್, ಬಾಷ್ಯಂ ವೃತ್ತ, ಸ್ಯಾಂಕಿ ರಸ್ತೆ, ಮಾರಮ್ಮ ಸರ್ಕಲ್, ಬಿಎಚ್‌ಇಎಲ್, ಯಶವಂತಪುರ ಮೇಲ್ಸೇ ತುವೆ, ಮೆಟ್ರೋ ನಿಲ್ದಾಣ ಬಲಭಾಗ ತಿರುವು, ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆ, ಗೊರಗುಂಟೆಪಾಳ್ಯ ಪಾಳ್ಯ ಜಂಕ್ಷನ್ ಎಡ ತಿರು ವು, ಸಿಎಂಟಿಐ, ಎಫ್‌ಟಿಐ, ಕಂಠೀರವ ಸ್ಟುಡಿಯೊ

ಇದನ್ನೂ ಓದಿ : ಅಂಬಿ ಸಾವಿನಲ್ಲೂ ವಿಕೃತಿ ಮೆರೆದ ಕಿರಾತಕರು