ಈ ವರ್ಷವೇ ಮುಕೇಶ್‌ ಅಂಬಾನಿ ಪುತ್ರ ಆಕಾಶ್‌ ವಿವಾಹ?

First Published 5, Mar 2018, 9:32 AM IST
Ambani Son Marriage News
Highlights

ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪುತ್ರ ಅಕಾಶ್‌ ಅಂಬಾನಿ ಮತ್ತು ವಜ್ರೋದ್ಯಮಿ ರಸೆಲ್‌ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ಅವರ ವಿವಾಹ ಈ ವಷಾಂತ್ಯಕ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ: ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪುತ್ರ ಅಕಾಶ್‌ ಅಂಬಾನಿ ಮತ್ತು ವಜ್ರೋದ್ಯಮಿ ರಸೆಲ್‌ ಮೆಹ್ತಾ ಪುತ್ರಿ ಶ್ಲೋಕಾ ಮೆಹ್ತಾ ಅವರ ವಿವಾಹ ಈ ವಷಾಂತ್ಯಕ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮಾ.24ರಂದು ವಿವಾಹ ನಿಶ್ಚಿತಾರ್ಥ ನಡೆಯಲಿದೆ ಎಂದೂ ಹೇಳಲಾಗಿದೆ. ಆದರೆ ಈ ಬಗ್ಗೆ ಅಂಬಾನಿ ಕುಟುಂಬ ಮತ್ತು ಅವರ ರಿಲಯನ್ಸ್‌ ಇಂಡಸ್ಟ್ರಿ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ ಎಂಗೇಜ್‌ಮೆಂಟ್‌ ಅಥವಾ ವಿವಾಹದ ದಿನಾಂಕ ನಿಗದಿಯಾಗಿಲ್ಲ. ಅಂತಹ ಯಾವುದೇ ಸಂತಸದ ಕ್ಷಣಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಾಗಿ ಎಂದು ಕುಟುಂಬ ಮೂಲಗಳು ತಿಳಿಸಿವೆ. ಆಕಾಶ್‌ ಮತ್ತು ಶ್ಲೋಕಾ ಒಂದೇ ಶಾಲೆಯಲ್ಲಿ ಓದಿದವರು. ಎರಡೂ ಕುಟುಂಬಗಳು ಪರಸ್ಪರ ಪರಿಚಿತ.

loader