ಅಮರನಾಥ್ ಯಾತ್ರಾ ದಾಳಿಯ ಮಾಸ್ಟರ್ ಮೈಂಡ್ ಲಷ್ಕರೆ ತೋಯ್ಬಾ ಕಮಾಂಡರ್ ಅಬು ಇಸ್ಮಾಯಿಲ್ ಹಾಗೂ ಇನ್ನೊಬ್ಬ ಉಗ್ರಗಾಮಿಯನ್ನು ಭದ್ರತಾ ಪಡೆಗಳು ಕಾಶ್ಮೀರದಲ್ಲಿಂದು ಎನ್'ಕೌಂಟರ್ ಮಾಡಿದ್ದಾರೆ.

ನವದೆಹಲಿ (ಸೆ.14): ಅಮರನಾಥ್ ಯಾತ್ರಾ ದಾಳಿಯ ಮಾಸ್ಟರ್ ಮೈಂಡ್ ಲಷ್ಕರೆ ತೋಯ್ಬಾ ಕಮಾಂಡರ್ ಅಬು ಇಸ್ಮಾಯಿಲ್ ಹಾಗೂ ಇನ್ನೊಬ್ಬ ಉಗ್ರಗಾಮಿಯನ್ನು ಭದ್ರತಾ ಪಡೆಗಳು ಕಾಶ್ಮೀರದಲ್ಲಿಂದು ಎನ್'ಕೌಂಟರ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಲ್ವರು ಮೋಸ್ಟ್ ವಾಂಟೆಡ್ ಉಗ್ರಗಾಮಿಗಳಲ್ಲಿ ಅಬು ಇಸ್ಮಾಯಲ್ ಕೂಡಾ ಒಬ್ಬನಾಗಿದ್ದು ಜುಲೈನಲ್ಲಿ ನಡೆದ ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿಯ ಮಾಸ್ಟರ್ ಮೈಂಡ್ ಇವನೇ ಆಗಿದ್ದ. ಇಂದು ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಬು ಇಸ್ಮಾಯಿಲ್ ಮೃತಪಟ್ಟಿದ್ದಾನೆ.

ಕಾಶ್ಮೀರದ ಹೊರ ವಲಯದಲ್ಲಿರುವ ನೌಗಾಮ್ ಜಿಲ್ಲೆಯ ಔರಿಬಾಗ್'ನಲ್ಲಿ ಇಂದು ಸಂಜೆ 4.15 ರ ಸುಮಾರಿಗೆ ಭದ್ರತಾ ಪಡೆಗಳು ಎನ್'ಕೌಂಟರ್ ಶುರು ಮಾಡಿದರು. ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಉಗ್ರರು ಒಂದು ಮನೆಯಲ್ಲಿ ಅವಿತಿಟ್ಟುಕೊಂಡರು. ಅರ್ಧತಾಸು ಕಾರ್ಯಾಚರಣೆ ಬಳಿಕ ಕಡೆಗೂ ಅಬು ಇಸ್ಮಾಯಿಲ್ ಹಾಗೂ ಅವನ ಸಹವರ್ತಿಯನ್ನು ಎನ್'ಕೌಂಟರ್ ಮಾಡುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.