ಬೆಂಗಳೂರು[ಜು.02]: ಶಾಸಕರ ರಾಜೀನಾಮೆಯ ಮಾಸ್ಟರ್‌ ಮೈಂಡ್‌ ನಾನಲ್ಲ. ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಜೆಡಿಎಸ್‌ ಶಾಸಕ ಎಚ್‌. ವಿಶ್ವನಾಥ್‌ ತಿಳಿಸಿದ್ದಾರೆ.

ಶ್ರೀಕಾಳಿಕಾಂಬ ದೇವರ ದರ್ಶನಕ್ಕಾಗಿ ಕೋಲ್ಕತ್ತಾಕ್ಕೆ ತೆರಳುವ ಮುನ್ನ ಸೋಮವಾರ ನಗರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಶಾಸಕ ಸ್ಥಾನಕ್ಕೆ ಆನಂದ್‌ಸಿಂಗ್‌ ರಾಜೀನಾಮೆ ನೀಡುತ್ತಿದ್ದಂತೆ ಅದರ ಮಾಸ್ಟರ್‌ಮೆಂಡ್‌ ವಿಶ್ವನಾಥ್‌ ಎಂಬ ವಂದಂತಿಗಳ ಹಬ್ಬಿದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದರು.

ಯಾವುದೇ ಶಾಸಕರ ರಾಜೀನಾಮೆಗೂ, ನನಗೂ ಸಂಬಂಧ ಇಲ್ಲ. ನಾನಂತೂ ರಾಜೀನಾಮೆ ನೀಡುವುದಿಲ್ಲ. ನಾನು ಮಾಸ್ಟರ್‌ ಮೈಂಡ್‌ ಎಂಬುದು ಸತ್ಯಕ್ಕೆ ದೂರವಾದದ್ದು. ಜೆಡಿಎಸ್‌ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲದೇ, ರಾಜೀನಾಮೆ ವಿಚಾರವು ಎಷ್ಟುನಿಜ ಎಂಬುದು ಸಹ ಗೊತ್ತಿಲ್ಲ ಎಂದರು.