ಪ್ರಧಾನಿಯನ್ನು 2014ರ ಲೋಕಸಭಾ ಚುನಾವಣೆಗೂ ಮುನ್ನ ಚಾಯ್ ವಾಲಾ ಎಂದು ವ್ಯಂಗ್ಯವಾಡಿದ್ದ ಅಯ್ಯರ್, ಗುಜರಾತ್ ಚುನಾವಣೆಗೂ ಮುನ್ನ ಮೋದಿಯನ್ನು ನೀಚ ಎಂದು ಹೇಳುವ ಮೂಲಕ ವಿವಾದ ಸೃಷ್ಠಿಸಿದ್ದರು. ಅಯ್ಯರ್ ವಿವಾದಾತ್ಮಕ ಹೇಳಿಕೆಯಿಂದ ಚುನಾವಣೆಯಲ್ಲಿ ಗೆಲ್ಲುವ ಅವಕಾಶವನ್ನು ಹಾಳು ಮಾಡಿಕೊಳ್ಳುವಂತಾಯಿತು ಎಂದು ಠಾಕೂರ್ ಕಿಡಿಕಾರಿದ್ದಾರೆ.

ಅಹಮದಾಬಾದ್(ಡಿ.23): ಪ್ರಧಾನಿ ಮೋದಿಯನ್ನು ಗುಜರಾತ್ ಚುನಾವಣೆಯಲ್ಲಿ ನೀಚ ಎಂದು ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿತಗೊಂಡಿರುವ ಮಣಿಶಂಕರ್ ಅಯ್ಯರ್ ಬಿಜೆಪಿ ಏಜೆಂಟ್ ಎಂದು ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೂರ್ ಗಂಭೀರ ಆರೋಪ ಮಾಡಿದ್ದಾರೆ.

ಪ್ರಧಾನಿಯನ್ನು 2014ರ ಲೋಕಸಭಾ ಚುನಾವಣೆಗೂ ಮುನ್ನ ಚಾಯ್ ವಾಲಾ ಎಂದು ವ್ಯಂಗ್ಯವಾಡಿದ್ದ ಅಯ್ಯರ್, ಗುಜರಾತ್ ಚುನಾವಣೆಗೂ ಮುನ್ನ ಮೋದಿಯನ್ನು ನೀಚ ಎಂದು ಹೇಳುವ ಮೂಲಕ ವಿವಾದ ಸೃಷ್ಠಿಸಿದ್ದರು. ಅಯ್ಯರ್ ವಿವಾದಾತ್ಮಕ ಹೇಳಿಕೆಯಿಂದ ಚುನಾವಣೆಯಲ್ಲಿ ಗೆಲ್ಲುವ ಅವಕಾಶವನ್ನು ಹಾಳು ಮಾಡಿಕೊಳ್ಳುವಂತಾಯಿತು ಎಂದು ಠಾಕೂರ್ ಕಿಡಿಕಾರಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದ ಪರಾಮರ್ಶೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಣಿಶಂಕರ್ ಅಯ್ಯರ್ ವಿರುದ್ಧ ಅಲ್ಪೇಶ್ ಠಾಕೂರ್ ಹರಿಹಾಯ್ದಿದ್ದಾರೆ. ಅಲ್ಲದೆ ಚುನಾವಣಾ ಪ್ರಚಾರದ ವೇಳೆ ಜಿಎಸ್‌'ಟಿ ಟೀಕಿಸುವ ಬದಲು ಸೂರತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಕಾಂಗ್ರೆಸ್ ಗಮನ ಕೇಂದ್ರೀಕರಿಸಬೇಕಿತ್ತು ಎಂದು ಅಲ್ಪೇಶ್ ಠಾಕೂರ್ ಹೇಳಿದ್ದಾರೆ.