ನವದೆಹಲಿ (ಫೆ.13): ಕರಾವಳಿ ಕರ್ನಾಟಕದ ಜನಪ್ರಿಯ ಕ್ರೀಡೆ ಕಂಬಳವನ್ನು ಸರ್ಕಾರ ಕಾನೂನುಬದ್ಧಗೊಳಿಸಿದ ಬೆನ್ನಲ್ಲೇ, ಪ್ರಾಣಿ ಹಕ್ಕುಗಳಿಗೆ ಹೋರಾಡುವ ಪೇಟಾ ಸಂಸ್ಥೆಯು ಈ ಕ್ರಮವನ್ನು ಭಾರತದ ಮೇಲೆ ಕಪ್ಪು ಚುಕ್ಕೆ ಎಂದು ಬಣ್ಣಿಸಿದೆ.
ನವದೆಹಲಿ (ಫೆ.13): ಕರಾವಳಿ ಕರ್ನಾಟಕದ ಜನಪ್ರಿಯ ಕ್ರೀಡೆ ಕಂಬಳವನ್ನು ಸರ್ಕಾರ ಕಾನೂನುಬದ್ಧಗೊಳಿಸಿದ ಬೆನ್ನಲ್ಲೇ, ಪ್ರಾಣಿ ಹಕ್ಕುಗಳಿಗೆ ಹೋರಾಡುವ ಪೇಟಾ ಸಂಸ್ಥೆಯು ಈ ಕ್ರಮವನ್ನು ಭಾರತದ ಮೇಲೆ ಕಪ್ಪು ಚುಕ್ಕೆ ಎಂದು ಬಣ್ಣಿಸಿದೆ.
ಕಂಬಳವನ್ನು ಕಾನೂನುಬದ್ಧಗೊಳಿಸುವ ಕ್ರಮವು ನಾಚಿಕೆಗೇಡು ಹಾಗೂ ಭಾರತದ ಮೇಲೆ ಕಪ್ಪು ಚುಕ್ಕೆಯಾಗಿದೆಯೆಂದು ಹೇಳಿದೆ. ಈವರೆಗೆ ಭಾರತವು ಪ್ರಾಣಿದಯೆಗೆ ಹೆಸರುವಾಸಿಯಾಗಿತ್ತು. ಈ ಬೆಳವಣಿಗೆಗಳು ಭಾರತದ ಮಟ್ಟಿಗೆ ಹಿನ್ನಡೆಯಾಗಿವೆ ಎಂದು ಪೇಟಾ ಸಿ.ಇ.ಓ ಪೂರ್ವ ಜೋಶಿಪುರಾ ಹೇಳಿದ್ದಾರೆ.
ಬೇರೆ ದೇಶಗಳು ಪ್ರಾಣಿಹಿಂಸೆಯನ್ನು ನಿಷೇಧಿಸುತ್ತಿರುವಾಗ ಇಲ್ಲಿ ಕಂಬಳಕ್ಕೆ ಅನುಮತಿ ನೀಡಿದ್ದು ನಾಚಿಕೆಗೇಡು ಎಂದು ಪೇಟಾ ಅಭಿಪ್ರಾಯಪಟ್ಟಿದೆ.