ನಾಡಗೀತೆಗೆ ಸಿಎಂ ಅಗೌರವ: ಆರೋಪ

news | Wednesday, March 14th, 2018
Suvarna Web Desk
Highlights

ಸರ್ಕಾರಿ ಸಮಾ​ರಂಭ​ದಲ್ಲಿ ನಾಡ​ಗೀತೆ ಹಾಡು​ವಾ​ಗ​ಲೇ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅಡಕೆ, ಎಲೆ ಹಾಕಿ​ಕೊಂಡು ಮೆಲ್ಲು​ತ್ತಾ, ನಾಡ​ಗೀ​ತೆಗೆ ಅಗೌ​ರ​ವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ,

ದಾವ​ಣ​ಗೆರೆ: ಸರ್ಕಾರಿ ಸಮಾ​ರಂಭ​ದಲ್ಲಿ ನಾಡ​ಗೀತೆ ಹಾಡು​ವಾ​ಗ​ಲೇ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅಡಕೆ, ಎಲೆ ಹಾಕಿ​ಕೊಂಡು ಮೆಲ್ಲು​ತ್ತಾ, ನಾಡ​ಗೀ​ತೆಗೆ ಅಗೌ​ರ​ವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ,

ಹೈಸ್ಕೂಲ್‌ ಮೈದಾ​ನ​ದಲ್ಲಿ ನಿಗ​ದಿತ ಸಮ​ಯ​ಕ್ಕಿಂತಲೂ ತಡ​ವಾ​ಗಿಯೇ ಆರಂಭ​ಗೊಂಡ ವೇದಿ​ಕೆಯನ್ನೇ​ರಿದ ಸಿಎಂ ಸಿದ್ದ​ರಾ​ಮಯ್ಯ ಸಮಾ​ರಂಭದ ಆರಂಭ​ದಲ್ಲಿ ನಾಡ​ಗೀ​ತೆ ಹಾಡ​ಲಾ​ರಂಭಿ​ಸಿ​ದಾಗ ಎಲ್ಲರೂ ಎದ್ದು ನಿಂತರು. ಗೀತೆ ಕೇಳಿ ಬರು​ತ್ತಿ​ದ್ದಾ​ಗಲೇ ತಮ್ಮ ಪಂಚೆ ಸರಿ ಮಾಡಿ​ಕೊ​ಳ್ಳುತ್ತಾ, ದೇಹ​ವನ್ನು ಅತ್ತಿಂದಿತ್ತ ಹೊರ​ಳಿ​ಸು​ತ್ತಿ​ದ್ದರು. ಸಿಎಂ ಅವರ ಈ ವರ್ತನೆ ಸಾರ್ವಜನಿಕರ ವಲಯದಿಂದ ಬೇಸರದ ಮಾತುಗಳು ಕೇಳಿಬಂದಿವೆ.

ಇದೇವೇಳೆ ನಾಗಮಂಗಲದಲ್ಲಿ ಹರದನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಮತ್ತು ಶಾಸಕ ಎನ್‌.ಚಲುವರಾಯಸ್ವಾಮಿ ನಾಡಗೀತೆಗೆ ಅವಮಾನ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk