ಎನ್ ಡಿಎ ಒಕ್ಕೂಟದಿಂದ ಹೊರ ಹೋಗುತ್ತಾ ಮತ್ತೊಂದು ಪ್ರಬಲ ಪಕ್ಷ?

First Published 29, Jul 2018, 12:04 PM IST
Allies Bring More Trouble For BJP
Highlights

ಎಲ್ ಜೆಪಿ  ಬಳಿಕ ಇದೀಗ ಮತ್ತೊಂದು ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ.   ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅಟ್ರಾಸಿಟಿ ಕಾಯ್ದೆ ದುರ್ಬಲವಾಗದಂತೆ ತಡೆಯಲು ಒಂದೋ ಸುಗ್ರೀವಾಜ್ಞೆ ಹೊರಡಿಸ ಬೇಕು ಇಲ್ಲವಾದಲ್ಲಿ ಮಸೂದೆ ತರಬೇಕು ಎಂದು ಜೆಡಿಯು ಆಗ್ರಹಪಡಿಸಿದೆ. 

ಪಟನಾ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ ಕಾನೂನು) ದುರ್ಬಲವಾಗಿರುವ ಕುರಿತು ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷ ಸಿಡಿದು ನಿಂತ ಬೆನ್ನಲ್ಲೇ ಇದೀಗ ಎನ್‌ಡಿಎ ಕೂಟದ ಮತ್ತೊಂದು ಮಿತ್ರಪಕ್ಷ ಜೆಡಿ ಯು ಕೂಡ ಪ್ರಬಲವಾಗಿ ದನಿ ಎತ್ತಿದೆ. ಕೇಂದ್ರ ಸರ್ಕಾರ ಅಟ್ರಾಸಿಟಿ ಕಾಯ್ದೆ ದುರ್ಬಲವಾಗದಂತೆ ತಡೆಯಲು ಒಂದೋ ಸುಗ್ರೀವಾಜ್ಞೆ ಹೊರಡಿಸ ಬೇಕು ಇಲ್ಲವಾದಲ್ಲಿ ಮಸೂದೆ ತರಬೇಕು ಎಂದು ಆಗ್ರಹಪಡಿಸಿದೆ. ಬಿಜೆಪಿಗೆ ಇದು ಹೊಸ ತಲೆಬೇನೆ ತಂದಿದೆ.

ದಲಿತರ ಕಳವಳಗಳನ್ನು ಹೋಗಲಾಡಿಸದೇ ಇದ್ದರೆ ಮುಂಬರುವ ಚುನಾವಣೆಗಳಲ್ಲಿ ದಲಿತರ ಮತಗಳನ್ನು ಬಿಜೆಪಿ ಕಳೆದುಕೊಳ್ಳಬೇಕಾಗುತ್ತದೆ ಎಂದು ಜೆಡಿಯು ರಾಷ್ಟ್ರೀಯ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಅವರು ಟೀವಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಕಾಯ್ದೆ ದುರ್ಬಲವಾಗುವುದನ್ನು ತಡೆಯದೇ ಹೋದಲ್ಲಿ ಆ. 9 ರಂದು ದಲಿತ ಸಂಘಟನೆಗಳು ಕರೆ ನೀಡಿರುವ ಮುಷ್ಕರದಲ್ಲಿ ಭಾಗವಹಿಸುವುದಾಗಿ ಲೋಕಜನಶಕ್ತಿ ಪಕ್ಷ ನೀಡಿರುವ ಹೇಳಿಕೆಯನ್ನು ಅವರು ಬೆಂಬಲಿಸಿದ್ದಾರೆ. 

ಮಾಜಿ ಪ್ರಧಾನಿ ವಿ.ಪಿ. ಸಿಂಗ್ ನೇತೃತ್ವ ದಲ್ಲಿ ಪಾಸ್ವಾನ್, ಲಾಲು ಪ್ರಸಾದ್ ಯಾದವ್ ಹಾಗೂ ಶರದ್ ಯಾದವ್ ಅವರು ದಲಿತರ ಹಿತರಕ್ಷಣೆಗಾಗಿ ಅಟ್ರಾಸಿಟಿ ಕಾಯ್ದೆ ರೂಪಿಸಿದ್ದರು. ಈಗ ಯಾರೇ ಆಗಲಿ ಅದನ್ನು ದುರ್ಬಲಗೊಳಿಸಲು ಯತ್ನಿಸಿದರೆ ಈ ನಾಯಕರಿಂದ ವಿರೋಧ ವ್ಯಕ್ತವಾಗುತ್ತದೆ ಎಂದು ಹೇಳಿದ್ದಾರೆ. 

ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸಬೇಕಿಲ್ಲ ಎಂಬ ತೀರ್ಪು ನೀಡಿದ್ದ  ಯಪೀಠದಲ್ಲಿದ್ದ ನಿವೃತ್ತ ನ್ಯಾ| ಎ.ಕೆ. ಗೋಯೆಲ್ ಅವರನ್ನು ರಾಷ್ಟ್ರೀ ಯ ಪರಿಸರ ನ್ಯಾಯಾಧಿಕರಣದ ಮುಖ್ಯಸ್ಥ ಹುದ್ದೆ ಯಿಂದ ವಜಾಗೊಳಿಸಬೇಕು ಎಂಬ ಲೋಕಜನಶಕ್ತಿ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ನಿವೃತ್ತಿಯಾದ 48 ತಾಸಿನಲ್ಲೇ ಗೋಯೆಲ್ ಅವರನ್ನು ನೇಮಕ ಆಡುವ ತುರ್ತು ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

loader