ಮೈತ್ರಿ ದಂಬಾಲು ಬಿದ್ದಿದ್ದು ನಾವಾ, ನೀವಾ: ಮೆಹಬೂಬಾ ಅಟ್ಯಾಕ್..!

First Published 19, Jun 2018, 5:50 PM IST
Alliance With BJP Was Not For Power: Mehbooba Mufti
Highlights

ಮೈತ್ರಿ ದಂಬಾಲು ಬಿದ್ದಿದ್ದು  ನಾವಾ, ನೀವಾ?

ಬಿಜೆಪಿ ಮೇಲೆ ಹರಿಹಾಯ್ದ ಮೆಹಬೂಬಾ ಮುಫ್ತಿ

ಪಿಡಿಪಿ-ಬಿಜೆಪಿ ಮೈತ್ರಿಕೂಟ ಅಂತ್ಯಕ್ಕೆ ಕಾರಣ ಏನು?

ಬಿಜೆಪಿ ಸುಳ್ಳು ಆರೋಪಗಳಿಗೆ ತಲೆ ಕೆಡಿಸಿಕೊಳ್ಳಲ್ಲ

ಪತ್ರಿಕಾಗೋಷ್ಠಿಯಲ್ಲಿ ಮೆಹಬೂಬಾ ಮುಫ್ತಿ ಹೇಳಿದ್ದೇನು?

ಶ್ರೀನಗರ(ಜೂ.19): ಜಮ್ಮು ಮತ್ತು ಕಾಶ್ಮೀರದ ಮೈತ್ರಿ ಸರ್ಕಾರ ಮುರಿದುಬಿದ್ದ ಕುರಿತು ನಿರ್ಗಮಿತ ಸಿಎಂ ಮೆಹಬೂಬಾ ಮುಫ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಪಿಡಿಪಿ ಜೊತೆಗಿನ ಮೈತ್ರಿ ಕಡಿದುಕೊಂಡ ಬಿಜೆಪಿ ವಿರುದ್ದ ಮುಫ್ತಿ ಹರಿಹಾಯ್ದಿದ್ದಾರೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೆಹಬೂಬಾ, ಸರ್ಕಾರ ರಚನೆ ಸಂದರ್ಭದಲ್ಲಿ ಪಿಡಿಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿಯೇ ಮುಂದಾಗಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ಅಧಿಕಾರಕ್ಕಾಗಿ ಬಿಜೆಪಿ ಜೊತೆ ಪಿಡಿಪಿ ಮೈತ್ರಿ ಮಾಡಿಕೊಂಡಿತು ಎಂಬ ಆರೋಪಕ್ಕೆ ತಿರುಗೇಟತ ನೀಡಿರುವ ಮೆಹಬೂಬಾ, ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ ಜೊತೆ ಕೈಜೋಡಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಮೈತ್ರಿಗೆ ತಾನಾಗಿಯೇ ಮುಂದೆ ಬಂದ ಬಿಜೆಪಿ, ಇದೀಗ ಕುಂಟು ನೆಪ ಹೇಳಿ ತಾನಾಗಿಯೇ ಮೈತ್ರಿ ಕಡಿದುಕೊಂಡಿದೆ ಎಂದು ಮೆಹವಬೂಬಾ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ಮಾಡುವಲ್ಲಿ ಮುಫ್ತಿ ವಿಫಲರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಆರೋಪಿಸಿದ್ದರು.

ಅಲ್ಲದೇ ರಾಜ್ಯದ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ 80 ಸಾವಿರ ಕೋಟಿ ರೂ.ಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಎಲ್ಲ ಆರೋಪಗಳಿಗೆ ತಿರುಗೇಟು ನೀಡಿರುವ ಮೆಹಬೂಬಾ, ಶಾಂತಿ ಸ್ಥಾಪನೆಗೆ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ರಕ್ಷಿಸಿಕೊಳ್ಳುತ್ತಿರುವ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದಿದ್ದಾರೆ.    

loader