ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್'ನ ನ್ಯಾಯಪೀಠ ಸರ್ಕಾರ ಮಾರ್ಚ್ ನಂತರ ನವೀಕರಿಸದ ಪರವಾನಗಿಯನ್ನು ನವೀಕರಿಸಬೇಕೆಂದು ತಿಳಿಸಿದೆ. ರಾಜ್ಯ ಸರ್ಕಾರ ಕಸಾಯಿಖಾನೆಗಳನ್ನು ನಿಯಂತ್ರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ನ್ಯಾಯಾಮೂರ್ತಿ ಎಪಿ ಶಾಹಿ ತಮ್ಮ ಆದೇಶದ ಪ್ರತಿಯಲ್ಲಿ ತಿಳಿಸಿದ್ದಾರೆ.

ಲಖನೌ(ಮೇ.12): ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ'ನಾಥ್ ಅವರಿಗೆ ಮೊದಲ ಬಾರಿಗೆ ಹಿನ್ನಡೆಯಾಗಿದ್ದು, ಮಾಂಸ ಮಾರಾಟಗಾರರಿಗೆ ಪರವಾನಗೆ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.

ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್'ನ ನ್ಯಾಯಪೀಠ ಸರ್ಕಾರ ಮಾರ್ಚ್ ನಂತರ ನವೀಕರಿಸದ ಪರವಾನಗಿಯನ್ನು ನವೀಕರಿಸಬೇಕೆಂದು ತಿಳಿಸಿದೆ. ರಾಜ್ಯ ಸರ್ಕಾರ ಕಸಾಯಿಖಾನೆಗಳನ್ನು ನಿಯಂತ್ರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದು ನ್ಯಾಯಾಮೂರ್ತಿ ಎಪಿ ಶಾಹಿ ತಮ್ಮ ಆದೇಶದ ಪ್ರತಿಯಲ್ಲಿ ತಿಳಿಸಿದ್ದಾರೆ.

ಮಾರ್ಚ್ 19ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆ'ಗಳನ್ನು ನಿಷೇಧಿಸಿದ್ದರು. ಇದು ಭಾರತೀಯ ಜನತಾ ಪಕ್ಷದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯು ಸಹ ಆಗಿತ್ತು. ಮುಖ್ಯಮಂತ್ರಿಗಳ ಈ ಆದೇಶದಿಂದ ಹಲವು ಮಾಂಸ ಮಾರಾಟಗಾರರು ತೊಂದರೆಗೊಳಗಾಗಿ ಪ್ರತಿಭಟನೆಯನ್ನು ಸಹ ನಡೆಸಿದ್ದರು.

ಈ ಆದೇಶದಿಂದ ಮಾಂಸ ಮಾರಾಟಗಾರರು ಹೊಸದಾಗಿ ಪರವಾನಗಿ ಅಥವಾ ನವೀಕರಣಕ್ಕೆ ಅರ್ಕಿ ಸಲ್ಲಿಸಬಹುದು. ಕಸಾಯಿಖಾನೆಗಳನ್ನು ಮುಚ್ಚಿದವರು ಸಹ ನೂತನವಾಗಿ ಅರ್ಜಿ ಸಲ್ಲಿಸಬಹುದು.