Asianet Suvarna News Asianet Suvarna News

ಮೇಡ್ ಇನ್ ಅಮೇಠಿ ರೈಫಲ್ಸ್ ಗೆ ಮೋದಿ ಚಾಲನೆ

7.50 ಲಕ್ಷ ಎಕೆ-203 ಖರೀದಿಗೆ ಭಾರತ ಒಪ್ಪಂದ| ಎಕೆ-203 ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳು

All you need to know about AK 203 rifles to be made in Amethi
Author
Amethi, First Published Mar 4, 2019, 12:42 PM IST

ನವದೆಹಲಿ[ಮಾ.04]: ಭೂ, ವಾಯು ಹಾಗೂ ನೌಕಾಸೇನೆಯ ಯೋಧರಿಗೆ ಅತ್ಯಾಧುನಿಕ ಎಕೆ-203 ರೈಫಲ್‌ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಈ ಸಂಬಂಧ ರಷ್ಯಾ ಕಂಪನಿಯೊಂದರ ಜತೆಗೆ ಒಪ್ಪಂದ ಮಾಡಿಕೊಂಡಿದೆ.

ಎಕೆ-47 ರೈಫಲ್‌ಗಳ ಅತ್ಯಾಧುನಿಕ ಆವೃತ್ತಿಯೇ ಎಕೆ-203. ಎಕೆ-47 ಉತ್ಪಾದಿಸುವ ರಷ್ಯಾದ ಕಲಾಶ್ನಿಕೋವ್‌ ಕಂಪನಿಯೇ ಈ ರೈಫಲ್‌ಗಳನ್ನೂ ಉತ್ಪಾದಿಸುತ್ತದೆ. ಇದೀಗ ಆ ಕಂಪನಿಯಿಂದ ಬರೋಬ್ಬರಿ 7.50 ಲಕ್ಷ ರೈಫಲ್‌ಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಈ ರೈಫಲ್‌ಗಳು ಉತ್ತರಪ್ರದೇಶದ ಅಮೇಠಿಯಲ್ಲೇ ಉತ್ಪಾದನೆಯಾಗಲಿವೆ. ಸದ್ಯ ಯೋಧರು ಸ್ವದೇಶಿ ನಿರ್ಮಿತ ಇನ್ಸಾಸ್‌ ರೈಫಲ್‌ಗಳನ್ನು ಬಳಸುತ್ತಿದ್ದಾರೆ. ಅದರ ಬದಲಿಗೆ ಎಕೆ-203 ನೀಡಿ, ಸಶಸ್ತ್ರ ಪಡೆಗಳ ಬಲವರ್ಧನೆಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಪಡೆಗಳಿಗೆ ಈ ರೈಫಲ್‌ ಸರಬರಾಜು ಮಾಡಿದ ಬಳಿಕ ಅರೆಸೇನಾ ಹಾಗೂ ರಾಜ್ಯ ಪೊಲೀಸ್‌ ಪಡೆಗಳಿಗೂ ಇದೇ ರೈಫಲ್‌ ಒದಗಿಸುವ ಗುರಿ ಇದೆ. ಒಟ್ಟಾರೆ ಮುಂದಿನ 10ರಿಂದ 15 ವರ್ಷಗಳಲ್ಲಿ ದೇಶಾದ್ಯಂತ ಎಲ್ಲೆಡೆ ಎಕೆ-203 ಬಳಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇತ್ತೀಚೆಗಷ್ಟೇ ಅಮೆರಿಕದ ಸಿಗ್‌ ಸೌಯರ್‌ ರೈಫಲ್‌ಗಳನ್ನು ಖರೀದಿಸುವ ಸಂಬಂಧ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಅದರ ಜತೆಗೇ ಎಕೆ-203 ರೈಫಲ್‌ ಖರೀದಿಗೆ ಮುಂದಾಗಿರುವುದು ಮಹತ್ವ ಪಡೆದುಕೊಂಡಿದೆ.

Follow Us:
Download App:
  • android
  • ios