ಶೀಘ್ರದಲ್ಲೇ ಎಲ್ಲ ರೈಲುಗಳಲ್ಲಿ ಏಕ ರೂಪ ದ 22 ಬೋಗಿಗಳನ್ನು ಅಳವಾಡಿಸಲಾಗುತ್ತದೆ. ಇದರಿಂದ ರೈಲುಗಳ ವಿಳಂಬ ಸಂಚಾರ ತಪ್ಪಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ಹೇಳಿದ್ದಾರೆ.
ನವದೆಹಲಿ: ಶೀಘ್ರದಲ್ಲೇ ಎಲ್ಲ ರೈಲುಗಳಲ್ಲಿ ಏಕ ರೂಪ ದ 22 ಬೋಗಿಗಳನ್ನು ಅಳವಾಡಿಸಲಾಗುತ್ತದೆ. ಇದರಿಂದ ರೈಲುಗಳ ವಿಳಂಬ ಸಂಚಾರ ತಪ್ಪಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ಹೇಳಿದ್ದಾರೆ. ಪ್ರಸ್ತುತ ರೈಲುಗಳಿಗೆ 12, 16, 18, 22 ಅಥವಾ 26 ಬೋಗಿಗಳನ್ನು ಅಳವಡಿಸಲಾಗುತ್ತದೆ.
ಆದರೆ ಈ ವಿವಿಧ ಸಂಖ್ಯೆಯ ಬೋಗಿಗಳಿಂದಾಗಿ ಎಲ್ಲಾ ರೈಲುಗಳನ್ನು ಎಲ್ಲಾ ಮಾರ್ಗಗಳಲ್ಲೂ ಬಳಸಲು ಆಗುತ್ತಿಲ್ಲ. ಈ ರೈಲುಗಳ ನಿರ್ವಹಣೆ, ಸ್ವಚ್ಛತೆ ವೇಳೆ ವಿಳಂಬ ವಾದರೆ ಪ್ರಯಾಣವೂ ವಿಳಂಬವಾಗುತ್ತದೆ. ಇದರ ಬದಲು 22 ಬೋಗಿಗಳ ಏಕರೂಪದ ರೈಲುಗಳಿದ್ದರೆ ಯಾವ ರೈಲನ್ನು ಯಾವ ಮಾರ್ಗಕ್ಕಾದರೂ ಕಳುಹಿಸಬಹುದು ಎಂಬುದು ರೈಲ್ವೆಯ ಚಿಂತನೆಯಾಗಿದೆ ಎಂದರು.
