ಕಮ್ಮನಹಳ್ಳಿಯಲ್ಲಿ ಜನವರಿ 1ರ ಮಧ್ಯರಾತ್ರಿ ನಡೆದ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಪೊಲೀಸರು ಕೊನೆಗೂ ಎಡೆಮುರಿ ಕಟ್ಟಿದ್ದಾರೆ. ಎಲ್ಲರೂ 24 ವರ್ಷದ ಒಳಗಿನ ಆರೋಪಿಗಳೇ ಎನ್ನುವುದೇ ದುರಂತದ ಸಂಗತಿ....!
ಬೆಂಗಳೂರು(ಜ.06): ಕಮ್ಮನಹಳ್ಳಿಯಲ್ಲಿ ಜನವರಿ 1ರ ಮಧ್ಯರಾತ್ರಿ ನಡೆದ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಪೊಲೀಸರು ಕೊನೆಗೂ ಎಡೆಮುರಿ ಕಟ್ಟಿದ್ದಾರೆ. ಎಲ್ಲರೂ 24 ವರ್ಷದ ಒಳಗಿನ ಆರೋಪಿಗಳೇ ಎನ್ನುವುದೇ ದುರಂತದ ಸಂಗತಿ....!
ದಿನಾಂಕ : ಡಿಸೆಂಬರ್ 31, ಸಮಯ : ಮಧ್ಯರಾತ್ರಿ 2 ಗಂಟೆ 41 ನಿಮಿಷ
ಅವತ್ತು ರಾತ್ರಿ ಬೆಂಗಳೂರು ಮಾತ್ರವಲ್ಲ, ಇಡೀ ದೇಶವೇ ತಲೆತಗ್ಗಿಸುವಂತಾ ಘಟನೆಯೊಂದು ನಡೆದು ಹೋಗಿತ್ತು. ನ್ಯೂ ಇಯರ್ ಪಾರ್ಟಿ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವತಿಯ ಮೇಲೆ ಇಬ್ಬರು ಕಾಮುಕರು ಮೈ ಮೇಲೆರಗಿದ್ದರು. ಯುವತಿಯ ಮೇಲೆ ಮೃಗಗಳಂತೆ ಎರಗಿದ ಆ ಆರೋಪಿಗಳ ಬಂಧನಕ್ಕೆ ನೆರವಾಗಿದ್ದು ಪೊಲೀಸರಿಗೆ ದೊರೆತ ಆರು ಸಿಸಿಟಿವಿಗಳ ದೃಶ್ಯಾವಳಿಗಳು...!
ಕಮ್ಮನಹಳ್ಳಿ ಕಾಮುಕರು
ಆರೋಪಿ ನಂ.1: ಅಯ್ಯಪ್ಪ
ವಯಸ್ಸು - 19 ವರ್ಷ
ವಿದ್ಯಾರ್ಹತೆ - ಐಟಿಐ ಓದಿದ್ದಾನೆ
ಉದ್ಯೋಗ - ಡೆಲವರಿ ಬಾಯ್
ಆರೋಪಿ ನಂ.2: ಲಿನೋ
ವಯಸ್ಸು - 20 ವರ್ಷ
ವಿದ್ಯಾರ್ಹತೆ - ಬಿಕಾಂ ಓದಿದ್ದಾನೆ
ಉದ್ಯೋಗ - ಡೆಲವರಿ ಬಾಯ್
ಆರೋಪಿ ನಂ.3: ಸೋಮಶೇಖರ್
ವಯಸ್ಸು - 24 ವರ್ಷ
ವಿದ್ಯಾರ್ಹತೆ - ಎಸ್ಸೆಸ್ಸೆಲ್ಸಿ ಓದಿದ್ದಾನೆ
ಉದ್ಯೋಗ - ಕ್ಯಾಬ್ ಚಾಲಕ
ಆರೋಪಿ ನಂ.4: ಸುದೇಶ್
ವಯಸ್ಸು - 19 ವರ್ಷ
ವಿದ್ಯಾರ್ಹತೆ - ಪಿಯುಸಿ ಓದಿದ್ದಾನೆ
ಉದ್ಯೋಗ - ಡೆಲವರಿ ಬಾಯ್
ಸಿಸಿಟಿವಿಗಳಲ್ಲಿ ದೊರೆತ ದೃಶ್ಯಗಳು ಮತ್ತು ಕೆಲ ಮಾಹಿತಿದಾರರು ನೀಡಿದ ಸುಳಿವಿನ ಆಧಾರದ ಮೇಲೆ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಅಯ್ಯಪ್ಪ, 20 ವರ್ಷದ ಲೆನೋ, 20 ವರ್ಷದ ಸುದೇಶ್, ಮತ್ತು 24 ವರ್ಷದ ಸೋಮಶೇಖರ್ ಬಂಧಿತ ಆರೋಪಿಗಳು. ಬಂದಿತರೆಲ್ಲರೂ, 25 ವರ್ಷದೊಳಗಿನ ಆರೋಪಿಗಳಾಗಿರುವುದು ನಿಜಕ್ಕೂ ದುರಂತದ ವಿಷಯವಾಗಿದೆ...!
