ಕುಣಿಗಲ್ (ಫೆ.09): ನೂರಕ್ಕೂ ಅಧಿಕ ಸಿಬ್ಬಂದಿ ಹೊತ್ತ ಪರೀಕ್ಷಾರ್ಥ ರೈಲಿಗೆ ಸಂಭವಿಸಬಹುದಾಗಿದ್ದ ಭಾರಿ ಅವಘಡ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿರುವ ಘಟನೆ ನಡೆದಿದೆ. 

ಕುಣಿಗಲ್ (ಫೆ.09): ನೂರಕ್ಕೂ ಅಧಿಕ ಸಿಬ್ಬಂದಿ ಹೊತ್ತ ಪರೀಕ್ಷಾರ್ಥ ರೈಲಿಗೆ ಸಂಭವಿಸಬಹುದಾಗಿದ್ದ ಭಾರಿ ಅವಘಡ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿರುವ ಘಟನೆ ನಡೆದಿದೆ. 

ರೈಲ್ವೆ ಕಾಮಗಾರಿಯಿಂದ ಮಲ್ಲಾಘಟ್ಟ ವಾರ್ಡ್ ಇಬ್ಭಾಗವಾಗಿದ್ದು ಜನರಿಗೆ ತೊಂದರೆ ಆಗುತ್ತಿದೆ. ಅದನ್ನು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡದ ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗುರುವಾರ ರೈಲು ಹಳಿಗೆ ಬಂಡೆಗಳನ್ನಿಟ್ಟು ಗುರುವಾರ ನಾಗರಿಕರು ಪ್ರತಿಭಟನೆ ನಡೆಸಿದರು. 

ಇದೇ ಸಂದರ್ಭದಲ್ಲಿ ತಾಲೂಕಿನ ಎಡೆಯೂರಿನಿಂದ ನಾಗಮಂಗಲ ತಾಲೂಕಿನ ಬಾಲಗಂಗಾಧರ ನಗರದವರೆಗಿನ ನೆಲಮಂಗಲ-ಶ್ರವಣಬೆಳಗೊಳ ನೂತನ ರೈಲ್ವೆ ಹಳಿ ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ರೈಲಿನಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ಪಟ್ಟಣದ ಎರಡನೆ ವಾರ್ಡ್‌ನ ಮಲ್ಲಾಘಟ್ಟ ಬಳಿ ರೈಲ್ವೆ ಹಳಿಗೆ ಬಂಡೆಹಾಕಿದ್ದನ್ನು ಗಮನಿಸಿದ ರೈಲು ಚಾಲಕ ದಿಢೀರ್ ರೈಲು ನಿಲ್ಲಿಸಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅವಘಡ ತಪ್ಪಿಹೋಗಿದೆ. ರೈಲು ನಿಂತ ಶಬ್ದಕ್ಕೆ ಬೆಚ್ಚಿದ ಯುವಕರ ಗುಂಪು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸುತ್ತಿದ್ದ ಮಲ್ಲಾಘಟ್ಟದ ರಫೀಕ್, ಶಫೀ, ಇಕ್ಬಾಲ್ ಎಂಬ ಯುವಕರನ್ನು ರೈಲ್ವೆ ಪೋಲಿಸರು ವಶಕ್ಕೆ ಪಡೆದು ಬೆಂಗಳೂರಿನ ರೈಲ್ವೆ ನ್ಯಾಯಾಲಯದಲ್ಲಿ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.