ಇದೇ ಬಾಂಬ್‌ ಬಳಕೆ ಏಕೆ?ಆಷ್ಘಾನಿಸ್ತಾನದ ಅಚಿನ್‌ ಜಿಲ್ಲೆಯಲ್ಲಿರುವ ಗುಹೆಗಳು ಮತ್ತು ಸುರಂಗಗಳ ಮೇಲೆ ಅಂದುಕೊಂಡಷ್ಟುಸುಲಭವಾಗಿ ಗುರಿಯಿಟ್ಟು ನೇರವಾಗಿ ಅಲ್ಲೇ ತೆರಳಿ ದಾಳಿ ನಡೆಸಲಾಗದು. ಏಕೆಂದರೆ ಗುಹೆಗಳು ಅಷ್ಟುದುರ್ಗಮ ಪ್ರದೇಶದಲ್ಲಿವೆ. ಜಿಪಿಎಸ್‌ ಆಧರಿತವಾದ ಜಿಬಿಯು-43 ಅಣುಯೇತರ ಬೃಹತ್‌ ಬಾಂಬ್‌ ನಿರ್ದಿಷ್ಟಗುರಿಗಳನ್ನು ಹೊಕ್ಕು ಗರಿಷ್ಠ ವಿನಾಶ ಉಂಟು ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇದನ್ನು ಐಸಿಸ್‌ ಇರುವ ಉಗ್ರರ ಗುಹೆಗಳ ಮೇಲೆ ಬಳಸಲಾಗಿದೆ ಎಂದು ಹೇಳಲಾಗಿದೆ. ಅಣುಯೇತರ ಬಾಂಬ್‌ ಆದ ಕಾರಣ ಆ ನಿರ್ದಿಷ್ಟಭಾಗದಲ್ಲಿ ಮಾತ್ರ ವಿನಾಶವಾಗುತ್ತದೆಯೇ ವಿನಾ ಹೆಚ್ಚು ವ್ಯಾಪ್ತಿಯಲ್ಲಿ ಹಾನಿ ಮಾಡದೆಂಬ ಉದ್ದೇಶದಿಂದಲೂ ಇದನ್ನು ಬಳಸಲಾಗಿದೆ.

ವಾಷಿಂಗ್ಟನ್‌/ಕಾಬೂಲ್‌: ಅಮೆರಿಕವು ಆಷ್ಘಾನಿಸ್ತಾನದಲ್ಲಿ ‘ಬಾಂಬ್‌ಗಳ ಮಹಾತಾಯಿ' (ಮದರ್‌ ಆಫ್‌ ಆಲ್‌ ಬಾಂಬ್ಸ್‌) ಎಂದು ಕರೆಸಿಕೊಳ್ಳುವ ವಿಶ್ವದ ಅತಿದೊಡ್ಡ ಪರಮಾಣೇತೇರ ಬಾಂಬ್‌ ಒಂದನ್ನು ಆಷ್ಘಾನಿಸ್ತಾನದ ಉಗ್ರರ ನೆಲೆಗಳ ಮೇಲೆ ಗುರುವಾರ ರಾತ್ರಿ ಹಾಕಿದೆ. ಇದೇ ಮೊದಲ ಬಾರಿ ಈ ಬಾಂಬ್‌ ಪ್ರಯೋಗವನ್ನು ಅಮೆರಿಕ ನಡೆಸಿದೆ. ಸಿರಿಯಾ ಮತ್ತು ಉ.ಕೊರಿಯಾ ಮೇಲೆ ಅಮೆರಿಕ ಯುದ್ಧೋನ್ಮಾದದಲ್ಲಿರುವ ಮಧ್ಯೆಯೇ ಈ ಕಾರ್ಯವನ್ನು ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಆಡಳಿತ ನೆರವೇರಿಸಿದೆ.

ನಂಗ್ರಹಾರ್‌ ಪ್ರಾಂತ್ಯದ ಅಚಿನ್‌ ಜಿಲ್ಲೆಯಲ್ಲಿರುವ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರರು ಅವಿತಿರುವ ಗುಹೆಯ ಮೇಲೆ ಈ ಬಾಂಬ್‌ ಹಾಕಲಾಗಿದೆ. ಬಾಂಬ್‌ 30 ಅಡಿ ಉದ್ದದ ಹಾಗೂ 10 ಸಾವಿರ ಕೇಜಿ ತೂಕದ ಬಾಂಬ್‌ ಇದಾಗಿದೆ. ಜಿಬಿಯು-43 ಹೆಸರಿನ ಈ ಬಾಂಬ್‌ನಲ್ಲಿ 11 ಟನ್‌ನಷ್ಟುಸ್ಫೋಟಕಗಳನ್ನು ಇದರಲ್ಲಿ ತುಂಬಬಹುದಾಗಿದೆ. ದಾಳಿಯಲ್ಲಿ ಉಗ್ರರ ನೆಲೆಗಳಿಗೆ ಭಾರೀ ಹಾನಿಯಾಗಿದ್ದು, ಸಾಕಷ್ಟುಸಂಖ್ಯೆಯಲ್ಲಿ ಸಾವು- ನೋವು ಸಂಭವಿಸಿದೆ ಎನ್ನಲಾಗಿದೆ.
ಇದೇ ಮೊದಲ ಬಾರಿಗೆ ಈ ಅಣುಯೇತರ ಬಾಂಬನ್ನು ಯುದ್ಧಭೂಮಿಯಲ್ಲಿ ಬಳಸಲಾಗಿದೆ. ಇರಾಕ್‌ ಯುದ್ಧದ ಸಂದರ್ಭದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಇದನ್ನು ಬಳಸಿರಲಿಲ್ಲ ಎಂದು ಶ್ವೇತಭವನದ ವಕ್ತಾರ ಶಾನ್‌ ಸ್ಪೈಸರ್‌ ಹೇಳಿದ್ದಾರೆ.

ಗುರುವಾರ ಸಂಜೆ ಆಷ್ಘಾನಿಸ್ತಾನದ ಕಾಲಮಾನ ಸಂಜೆ 7 ಗಂಟೆ ಸುಮಾರಿಗೆ (ಭಾರತೀಯ ಕಾಲಮಾನ ರಾತ್ರಿ 8) ಬಾಂಬ್‌ ಪ್ರಯೋಗ ನಡೆಯಿತು. ಬಾಂಬ್‌ ಇದ್ದ ಕ್ಷಿಪಣಿಯನ್ನು ಹೊತ್ತ ಅಮೆರಿಕದ ಎಂಸಿ-130 ಯುದ್ಧವಿಮಾನವು ಪಾಕಿಸ್ತಾನ-ಆಷ್ಘಾನಿಸ್ತಾನ ಗಡಿಯಲ್ಲಿರುವ ಅಚಿನ್‌ ಜಿಲ್ಲೆಯ ಗುಹೆಗಳು ಮತ್ತು ಸುರಂಗಗಳ ಮೇಲೆ ಬಾಂಬ್‌ ಹಾಕಿತು. ಈ ಗುಹೆಗಳಲ್ಲಿ ಐಸಿಸ್‌ ಉಗ್ರರು ಅವಿತಿರುತ್ತಾರೆ ಅಥವಾ ಯಾರಿಗೂ ಗೊತ್ತಾಗದಂತೆ ಚಲನವಲನಗಳನ್ನು ಮಾಡಲು ಬಳಸುತ್ತಾರೆ. ಅದಕ್ಕೆಂದೇ ಐಸಿಸ್‌ ಉಗ್ರರನ್ನು ಗಂಭೀರವಾಗಿ ಪರಿಗಣಿಸಿರುವ ಅಮರಿಕ, ಅವರು ಅವಿತ ಮತ್ತು ಸಂಚರಿಸುವ ಗುಹೆ ಮತ್ತು ಸುರಂಗಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಸ್ಪೈಸರ್‌ ಹೇಳಿದ್ದಾರೆ.
ಪೆಂಟಗನ್‌ ವಕ್ತಾರ ಆ್ಯಡಂ ಸ್ಟಂಪ್‌ ಕೂಡ ದಾಳಿಯ ಬಗ್ಗೆ ವಿವರಣೆ ನೀಡಿ, ಅಮೆರಿಕ ಇದೇ ಮೊದಲ ಬಾರಿಗೆ ಯುದ್ಧ ಭೂಮಿಯಲ್ಲಿ ಇಷ್ಟುದೊಡ್ಡ ಬಾಂಬ್‌ ಬಳಸಿದೆ. ಜಿಪಿಎಸ್‌ ತಂತ್ರಜ್ಞಾನ ಆಧರಿಸಿ ಯುದ್ಧವಿಮಾನವು ನಿರ್ದಿಷ್ಟಗುರಿಯ ಮೇಲೆ ಬಾಂಬ್‌ ಹಾಕಿದೆ ಎಂದರು.

ಇದೊಂದು ಯಶಸ್ವಿ ದಾಳಿ. ಬಾಂಬ್‌ ಹಾಕಲು ನಾನು ಸಮ್ಮತಿಸಿದ್ದೆ. ನಮ್ಮ ಮಿಲಿಟರಿ ಬಗ್ಗೆ ನಮಗೆ ಹೆಮ್ಮೆ ಇದೆ. ಅಮೆರಿಕದ ಮಿಲಿಟರಿ ಪಡೆ ವಿಶ್ವದಲ್ಲೇ ಅತ್ಯುತ್ತಮವಾದದ್ದು.
ಡೊನಾಲ್ಡ್‌ ಟ್ರಂಪ್‌ಅಮೆರಿಕ ಅಧ್ಯಕ್ಷ

ಆಷ್ಘಾನಿಸ್ತಾನದಲ್ಲಿರುವ ಐಸಿಸ್‌ ಘಟಕಕ್ಕೆ ಐಸಿಸ್‌-ಕೆ (ಐಸಿಸ್‌ ಖೊರಾಸಾನ್‌) ಎಂದು ಕರೆಯುತ್ತಾರೆ. ಇವರು ಪಾಕ್‌ ಗಡಿಯಲ್ಲಿರುವ ಅಚಿನ್‌ ಜಿಲ್ಲೆಯ ಗುಹೆ ಮತ್ತು ಸುರಂಗಗಳಲ್ಲಿ ಅವಿತು ಚಟುವಟಿಕೆಗಳನ್ನು ನಡೆಸುತ್ತಿದ್ದರು. ಹೀಗಾಗಿ ಇವರ ಚಟುವಟಿಕೆ ನಿಗ್ರಹಿಸಲು ಇದು ಸರಿಯಾದ ಕ್ರಮವಾವಾಗಿದೆ ಎಂದು ಆಷ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಯ ಮುಖ್ಯಸ್ಥರಾಗಿರುವ ಜ| ಜಾನ್‌ ನಿಕೋಲ್ಸನ್‌ ಹೇಳಿದ್ದಾರೆ. ಇ¨
ಈ ಬಾಂಬ್‌ ಎಷ್ಟುಹಾನಿ ಮಾಡಿದೆ? ಎಷ್ಟುಜನರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ತಕ್ಷಣ ಮಾಹಿತಿ ನೀಡಲು ಅಮೆರಿಕ ಸರ್ಕಾರ ನಿರಾಕರಿಸಿದೆ.

ಪರಮಾಣು ಬಾಂಬಿಗೂ ಇದಕ್ಕೂ ಏನು ವ್ಯತ್ಯಾಸ?

ಮುಖ್ಯ ವ್ಯತ್ಯಾಸವಿರುವುದು ಈ ಬಾಂಬ್‌ಗಳ ರಚನೆಯಲ್ಲಿ ಹಾಗೂ ಇವುಗಳ ಪರಿಣಾಮದಲ್ಲಿ.
್ಞ ಅಣುಬಾಂಬ್‌ ಸ್ಫೋಟಿಸಿದರೆ ನೂರಾರು ಕಿ.ಮೀ. ಸುತ್ತಳತೆಯ ಪ್ರದೇಶದಲ್ಲಿ ಭಾರಿ ಹಾನಿಯಾಗುತ್ತದೆ. ಆದರೆ, ಈ ಬಾಂಬ್‌ ಸ್ಫೋಟದಿಂದ ಕೇವಲ 1 ಕಿ.ಮೀ. ಸುತ್ತಳತೆಯಲ್ಲಿ ಹಾನಿಯಾಗುತ್ತದೆ.
್ಞ ಅಮೆರಿಕ ಈಗ ಸ್ಫೋಟಿಸಿದ ಬಾಂಬ್‌ನಿಂದಾದ ಹಾನಿಯ ಸಾವಿರ ಪಟ್ಟು ಹೆಚ್ಚು ಹಾನಿ ಈ ಹಿಂದೆ 2ನೇ ಮಹಾಯುದ್ಧದಲ್ಲಿ ಜಪಾನ್‌ ಮೇಲೆ ಅಮೆರಿಕ ಹಾಕಿದ ಅಣುಬಾಂಬ್‌ನಿಂದ ಆಗಿತ್ತು.
್ಞ ಎಂಒಎಬಿಯನ್ನು ಆರ್‌ಡಿಎಕ್ಸ್‌, ಟಿಎನ್‌ಟಿ, ಅಲ್ಯುಮಿನಿಯಂ ಪೌಡರ್‌, ಪ್ಯಾರಾಫಿನ್‌ ವ್ಯಾಕ್ಸ್‌, ಕ್ಯಾಲ್ಷಿಯಂ ಕ್ಲೋರೈಡ್‌ನಂತಹ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗಿದೆ. ಆದರೆ, ಅಣುಬಾಂಬ್‌ನಲ್ಲಿ ಯಾವುದೇ ಮಾದರಿಯ ಪರಮಾಣುಗಳ ಸಂಯೋಜನೆ ಅಥವಾ ವಿದಳನದಿಂದ ಏಕಾಏಕಿ ಅತಿಹೆಚ್ಚು ಶಕ್ತಿ ಬಿಡುಗಡೆಯಾಗುವಂತೆ ಮಾಡಲಾಗುತ್ತದೆ.
್ಞ ಅಣುಬಾಂಬ್‌ ಸ್ಫೋಟಿಸಿದರೆ ದಶಕಗಳ ಕಾಲ ಆ ಪ್ರದೇಶದಲ್ಲಿ ವಿಕಿರಣಗಳು ಗಾಳಿಯಲ್ಲಿ ಹರಡಿಕೊಂಡಿರುತ್ತವೆ ಮತ್ತು ಅಷ್ಟೂವರ್ಷಗಳ ಕಾಲ ಅಲ್ಲಿ ಅಂಗವಿಕಲ ಮಕ್ಕಳು ಹಾಗೂ ರೋಗಪೀಡಿತರು ಹುಟ್ಟುತ್ತಿರುತ್ತಾರೆ. ಆದರೆ, ಎಂಒಎಬಿ ಯಂತಹ ಬಾಂಬ್‌ಗಳ ಪರಿಣಾಮ ಅವುಗಳನ್ನು ಸ್ಫೋಟಿಸಿದಾಗ ಮಾತ್ರ ಇರುತ್ತದೆ.