ನಾವು ಮಾಡುತ್ತಿದ್ದ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯಿರಲಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿಯೇ ಮೂತ್ರವಿಸರ್ಜನೆ ಮಾಡಬೇಕಾಯಿತು'

ಮುಂಬೈ(ಜು.20): ನಾನು ರಸ್ತೆ ಬದಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ್ದೆ ಎಂದು ಖ್ಯಾತ ಬಾಲಿವುಡ್ ನಟಿಯೊಬ್ಬರು ಹೇಳಿದ್ದಾರೆ. ಅವರು ಮತ್ತಿನ್ಯಾರು ಅಲ್ಲ 'ಟು ಸ್ಟೇಟ್ಸ್' 'ಹೈವೇ',ಉಡ್ತಾ ಪಂಜಾಬ್ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ನಟಿ ಆಲಿಯಾ ಭಟ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿವಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ನಾವು ಕೆಲವೊಮ್ಮೆ ಎಲ್ಲದಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಅಲ್ಲದೆ ಕೆಲವು ಬಾರಿ ನಾನು ಸಹ ಈ ರೀತಿಯ ಪರಿಸ್ಥಿತಿ ಎದುರಿಸಿದ್ದೇನೆ. ಇಮ್ತಿಯಾಜ್ ಅಲಿ ನಿರ್ದೇಶನದ 'ಹೈವೇ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನನಗೆ ದೇಹಬಾದೆ ಉಂಟಾಯಿತು. ನಾವು ಮಾಡುತ್ತಿದ್ದ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯಿರಲಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿಯೇ ಮೂತ್ರವಿಸರ್ಜನೆ ಮಾಡಬೇಕಾಯಿತು' ಎಂದು ತಿಳಿಸಿದ್ದಾರೆ.

ಹೈವೇ ಚಿತ್ರವೂ ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿದ್ದು ಇದರಲ್ಲಿ ಆಲಿಯಾ ಭಟ್ ವೀರಾ ತ್ರಿಪಾಠಿ ಪಾತ್ರ ನಿರ್ವಹಿಸಿದ್ದರು.ಉಡ್ತಾ ಪಂಜಾಬ್ ಚಿತ್ರಕ್ಕಾಗಿ ಅವರು ಫಿಲ್ಮ'ಫೇರ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಸದ್ಯ ಭದ್ರಿನಾಥ್' ಕೀ ದುಲ್ಹಾನಿಯಾ ಹಾಗೂ ರಾಜಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.