ಬಿಎಫ್’ಸಿಗೆ ಗುಡ್’ಬೈ ಹೇಳಿದ ಕೋಚ್ ರೋಕಾ..!

Albert Roca Leaves as Bengaluru FC Coach After Two Successful Seasons
Highlights

ಬಿಎಫ್‌ಸಿ, ಎಎಫ್‌ಸಿ ಕಪ್ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಬಳಿಕ ಕೋಚ್ ತಮ್ಮ ನಿರ್ಧಾರ ಪ್ರಕಟಿಸಿದರು. 2016ರಲ್ಲಿ 2 ವರ್ಷದ ಅವಧಿಗೆ ಕ್ಲಬ್‌ನ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದ ರೋಕಾ, ತಮ್ಮ ಮಾರ್ಗದರ್ಶನದಲ್ಲಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದರು.

ಬೆಂಗಳೂರು(ಮೇ.18]: 2 ಯಶಸ್ವಿ ವರ್ಷಗಳನ್ನು ಪೂರೈಸಿದ ಬೆಂಗಳೂರು ಎಫ್‌ಸಿ ಫುಟ್ಬಾಲ್ ತಂಡದ ಕೋಚ್ ಆಲ್ಬರ್ಟ್ ರೋಕಾ, ಕ್ಲಬ್‌ನೊಂದಿಗೆ ತಮ್ಮ ಗುತ್ತಿಗೆ ಅವಧಿ ವಿಸ್ತರಿಸದಿರಲು ನಿರ್ಧರಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ರೋಕಾ, ಕ್ಲಬ್‌ಗೆ ಗುಡ್ ಬೈ ಹೇಳಿದ್ದು ಸ್ಪೇನ್‌ಗೆ ಹಿಂದಿರುಗಲಿದ್ದಾರೆ. 

ಬಿಎಫ್‌ಸಿ, ಎಎಫ್‌ಸಿ ಕಪ್ ನಾಕೌಟ್ ಹಂತಕ್ಕೆ ಪ್ರವೇಶಿಸಿದ ಬಳಿಕ ಕೋಚ್ ತಮ್ಮ ನಿರ್ಧಾರ ಪ್ರಕಟಿಸಿದರು. 2016ರಲ್ಲಿ 2 ವರ್ಷದ ಅವಧಿಗೆ ಕ್ಲಬ್‌ನ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದ ರೋಕಾ, ತಮ್ಮ ಮಾರ್ಗದರ್ಶನದಲ್ಲಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದರು. 

2016ರಲ್ಲಿ ಎಎಫ್‌ಸಿ ಕಪ್ ಫೈನಲ್ ಪ್ರವೇಶಿಸಿದ ಭಾರತದ ಮೊದಲ ತಂಡ ಎನ್ನುವ ದಾಖಲೆಯನ್ನು ಬಿಎಫ್‌ಸಿ ಬರೆದಿತ್ತು. ಚೊಚ್ಚಲ ಪ್ರಯತ್ನ ದಲ್ಲೇ ಐಎಸ್‌ಎಲ್ ರನ್ನರ್-ಅಪ್ ಆಗಿತ್ತು.

loader