ವಿಜಯಪುರ: ದೇಶದ ಅತೀ ದೊಡ್ಡ ಜಲಾಶಯಗಳಲ್ಲಿ ಒಂದಾದ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 519 .60 ಮೀಟರ್ ನೀರು ಸಂಗ್ರಹವಾಗಿದೆ. 

ಜಲಾಶಯವು 123.081 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಗುರುವಾರ ಗರಿಷ್ಠ ಮಟ್ಟವನ್ನು ತಲುಪಿದೆ. ಹೀಗಾಗಿ ಒಳಹರಿವಿನಿಂದ ಬರುವ ನೀರನ್ನು ಅಷ್ಟೇ ಪ್ರಮಾಣದಲ್ಲಿ ಹೊರಹರಿವಿನ ಮೂಲಕ ಬಿಡಲಾಗುತ್ತಿದೆ. 

45000 ಕ್ಯುಸೆಕ್ ನೀರನ್ನು ವಿದ್ಯುದಾಗಾರದ ಮೂಲಕ ಹರಿಬಿಟ್ಟರೆ ಎಲ್ಲ ಆರೂ ವಿದ್ಯುತ್ ಘಟಕಗಳು ಕಾರ್ಯಾಚರಣೆಯಾಗುತ್ತವೆ.