ಇಂದು(ಮಂಗಳವಾರ) ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ಭಾರತದ ಇಬ್ಬರು ಅಧಿಕಾರಿಗಳು ಸೇರಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಅಧಿಕಾರಿಗಳಲ್ಲಿ ಕನ್ನಡಿಗ ಮೇಜರ್ ಅಕ್ಷಯ್ ಗಿರೀಶ್ ಕೂಡ ಒಬ್ಬರು.
ನಗ್ರೋಟಾ(ನ.29): ಇವತ್ತು ಬೆಳ್ಳಂಬೆಳ್ಳಗೆ ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ನಡೆಸಿದ ಉಗ್ರರ ದಾಳಿಯಲ್ಲಿ ಬೆಂಗಳೂರಿನ ಯೋಧ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ (31) ಹುತಾತ್ಮರಾಗಿದ್ದಾರೆ.
ಇಂದು(ಮಂಗಳವಾರ) ಬೆಳಗ್ಗೆ ನಡೆದ ಕಾರ್ಯಾಚರಣೆಯಲ್ಲಿ ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ಭಾರತದ ಇಬ್ಬರು ಅಧಿಕಾರಿಗಳು ಸೇರಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಇಬ್ಬರು ಅಧಿಕಾರಿಗಳಲ್ಲಿ ಕನ್ನಡಿಗ ಮೇಜರ್ ಅಕ್ಷಯ್ ಗಿರೀಶ್ ಕೂಡ ಒಬ್ಬರು.
ಬೆಂಗಳೂರಿನ ಯಲಹಂಕದ ಗೇಟ್ ಗಾರ್ಡನ್ ನಿವಾಸಿ ಅಕ್ಷಯ್. ಇವರು ವಿವಾಹಿತರಾಗಿದ್ದು ಒಂದು ವರ್ಷದ ಮಗುವಿದೆ. ಅಕ್ಷಯ್ ಹುತಾತ್ಮರಾದ ಸುದ್ದಿ ಕುಟುಂಬಕ್ಕೆ ತಲುಪಿದ್ದು ತಂದೆ ಗಿರೀಶ್ ಕುಮಾರ್ ಮಗನ ಮೃತದೇಹ ತರುವ ಸಲುವಾಗಿ ಇಂದು ಮಧ್ಯಾಹ್ನ ನವದೆಹಲಿಗೆ ತೆರಳಿದ್ದಾರೆ.
ಸಂಜೆ ಭಾರತೀಯ ಸೇನೆ ಸ್ಥಳೀಯರನ್ನು ರಕ್ಷಣೆ ಮಾಡುವ ಸಂದರ್ಭದಲ್ಲಿ ಶರಣಾಗತಿಯ ನಾಟಕವಾಡಿ ಬಂದೂಕು ಕೆಳಗಿಟ್ಟಿದ್ದ ಕ್ರೂರಿ ಉಗ್ರರು ತಕ್ಷಣ ಐವರು ಯೋಧರ ಎದೆಗೆ ಗುಂಡಿಕ್ಕಿದ್ದಾರೆ. ಹುತಾತ್ಮರಲ್ಲಿ ಕನ್ನಡಿಗ ಮೇಜರ್ ಅಕ್ಷಯ್ ಗಿರೀಶ್ ಒಬ್ಬರು.
ನರಿಬುದ್ಧಿ ತೋರಿ ಗುಂಡಿಟ್ಟ ಕ್ರೂರಿಗಳು
ಸಂಜೆ ಭಾರತೀಯ ಸೇನೆ ಸ್ಥಳೀಯರನ್ನು ರಕ್ಷಣೆ ಮಾಡಿದ್ದಾರೆ. ಈ ವೇಳೆ ಶರಣಾಗತಿಯ ನಾಟಕವಾಡಿ ಬಂದೂಕು ಕೆಳಗಿಟ್ಟಿದ್ದ ಕ್ರೂರಿಗಳು ಯೋಧರು ಸ್ಥಳೀಯರ ರಕ್ಷಣೆ ಮಾಡುತ್ತಿದ್ದಾಗ ಐವರು ಯೋಧರ ಎದೆಗೆ ಗುಂಡಿಕ್ಕಿದ್ದಾರೆ. ಪ್ರತಿ ದಾಳಿ ನಡೆಸಿದ ಯೋಧರು 7 ಉಗ್ರರನ್ನು ಕೊಂದಿದ್ದಾರೆ.
ಸಾಂಬಾ ಸೆಕ್ಟರ್ನಲ್ಲೂ ಮೂವರು ಉಗ್ರರು ಫಿನಿಶ್
ಮತ್ತೊಂದ್ ಕಡೆ ಜಮ್ಮು-ಕಾಶ್ಮೀರದ ರಾಮಘಡ್ ಬಳಿಯ ಸಾಂಬಾ ಸೆಕ್ಟರ್ ಹತ್ತಿರ ಉಗ್ರರು ನುಸುಳಲು ಯತ್ನಿಸಿದರು. ಖಚಿತ ಮಾಹಿತಿ ಮೇರೆಗೆ ಬಿಎಸ್'ಎಫ್ ಯೋಧರು ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿದ್ದಾರೆ. ಸಾಂಬಾ ಸೆಕ್ಟರ್ ಬಳಿ ಕೂಡ ಯೋಧರಿಗೂ ಮತ್ತು ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ.
