ಈ ಯಾತ್ರೆಗೂ ಮುನ್ನವೇ ಎಸ್​ಪಿ ಕಾರ್ಯಕರ್ತರ ರೆಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಪಕ್ಷದ ಮುಖಂಡರಾದ ಶಿವಪಾಲ್ ಯಾದವ್, ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲೇ ಈ ಗಲಾಟೆ ನಡೆದಿದೆ. 

ಲಕ್ನೋ(ನ.03): ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ರದ ಯಾದವ ಯುದ್ಧ ಮತ್ತೆ ಮುಂದುವರೆದಿದೆ. ಸಿಎಂ ಅಖಿಲೇಶ್​​ ಯಾದವ್​​ ವಿಕಾಸ ಯಾತ್ರೆ ಹಮ್ಮಿಕೊಂಡಿದ್ದಾರೆ. 

ಆದರೆ, ಈ ಯಾತ್ರೆಗೂ ಮುನ್ನವೇ ಎಸ್​ಪಿ ಕಾರ್ಯಕರ್ತರ ರೆಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಪಕ್ಷದ ಮುಖಂಡರಾದ ಶಿವಪಾಲ್ ಯಾದವ್, ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲೇ ಈ ಗಲಾಟೆ ನಡೆದಿದೆ. 

ಯಾದವ ಕಲಹ ಇನ್ನೂ ಇದೆ ಅನ್ನೋದನ್ನು ಈ ಘರ್ಷಣೆ ತೋರಿಸಿದೆ. ಅಲ್ಲದೆ ಘರ್ಷಣೆ ಮಧ್ಯೆಯೂ ಸಮಾವೇಶ ಮುಂದುವರಿತು. ವಿಶೇಷ ಅಂದ್ರೆ ವಿಕಾಸ ಯಾತ್ರೆಯ ಱಲಿಯಲ್ಲಿ ಸಿಎಂ ಅಖಿಲೇಶ್​ ಯಾದವ್​​, ಎಸ್​​ಪಿ ಮುಖ್ಯಸ್ಥ ಮುಲಾಯಂ ಸಿಂಗ್​ ಯಾದವ್​ ಹಾಗೂ ಅಖಿಲೇಶ್​ ಚಿಕ್ಕಪ್ಪ ಶಿವಪಾಲ್​ ಯಾದವ್​ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.