ಇಲ್ಲಿನ ಸಂಖೇದ ಸರ್ಕಾರಿ ಶಾಲೆ ಹಮ್ಮಿಕೊಂಡಿದ್ದ ದಾಖಲಾತಿ ಅಭಿಯಾನದಲ್ಲಿ ಶಾಲಾ ಮಕ್ಕಳಿಗೆ 12 ಸಾವಿರ ಬ್ಯಾಗ್'ಗಳನ್ನು ಹಂಚಲಾಗಿತ್ತು.  ಬ್ಯಾಗ್ ತೆಗೆದು  ನೋಡಿದರೆ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ  ಅಚ್ಚರಿ ಕಾದಿತ್ತು. ಬ್ಯಾಗ್'ನ ಮೇಲೆ ಗುಜರಾತ್ ಸರ್ಕಾರದ ಲೋಗೋ ಬದಲು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್'ರ ಫೋಟೋ ರಾರಾಜಿಸುತ್ತಿತ್ತು. ಅದರ ಮೇಲೆ ಚೆನ್ನಾಗಿ ಓದಿ, ಚೆನ್ನಾಗಿ ಮುನ್ನಡೆಯಿರಿ ಎಂದು ಘೋಷವಾಕ್ಯವನ್ನು ಬರೆದುಕೊಂಡಿತ್ತು.

ಗಾಂಧಿನಗರ (ಜೂ.13): ಇಲ್ಲಿನ ಸಂಖೇದ ಸರ್ಕಾರಿ ಶಾಲೆ ಹಮ್ಮಿಕೊಂಡಿದ್ದ ದಾಖಲಾತಿ ಅಭಿಯಾನದಲ್ಲಿ ಶಾಲಾ ಮಕ್ಕಳಿಗೆ 12 ಸಾವಿರ ಬ್ಯಾಗ್'ಗಳನ್ನು ಹಂಚಲಾಗಿತ್ತು. ಬ್ಯಾಗ್ ತೆಗೆದು ನೋಡಿದರೆ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಅಚ್ಚರಿ ಕಾದಿತ್ತು. ಬ್ಯಾಗ್'ನ ಮೇಲೆ ಗುಜರಾತ್ ಸರ್ಕಾರದ ಲೋಗೋ ಬದಲು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್'ರ ಫೋಟೋ ರಾರಾಜಿಸುತ್ತಿತ್ತು. ಅದರ ಮೇಲೆ ಚೆನ್ನಾಗಿ ಓದಿ, ಚೆನ್ನಾಗಿ ಮುನ್ನಡೆಯಿರಿ ಎಂದು ಘೋಷವಾಕ್ಯವನ್ನು ಬರೆದುಕೊಂಡಿತ್ತು.

ಈ ಬ್ಯಾಗ್'ಗಳನ್ನು ತಯಾರು ಮಾಡಲು ಸೂರತ್'ನ ಛೋಟಾಲ ಎನ್ನುವ ಬ್ಯಾಗ್ ತಯಾರಿಕಾ ಘಟಕಕ್ಕೆ ವಹಿಸಲಾಗಿತ್ತು. ಬ್ಯಾಗಿಗೆ ಅಂಟಿಸುವುದಕ್ಕೆ ಗುಜರಾತ್ ಶಿಕ್ಷಣ ಇಲಾಖೆ ಸ್ಟಿಕ್ಕರ್ ಗಳನ್ನು ಕೂಡಾ ನೀಡಿತ್ತು. ಆದರೆ ಗುಜರಾತ್ ಸರ್ಕಾರದ ಸ್ಟಿಕರ್ ಬದಲು ಉತ್ತರ ಪ್ರದೇಶ ಸರ್ಕಾರದ ಸ್ಟಿಕರ್ ಅಂಟಿಸಿ ಈ ಅವಾಂತರ ನಡೆದಿದೆ. 12 ಸಾವಿರ ಬ್ಯಾಗ್'ಗಳಲ್ಲಿ ಅಖಿಲೇಶ್ ಫೋಟೋ ಇದೆ. ಬ್ಯಾಗ್ ತಯಾರಿಕಾ ಘಟಕ ಇದಕ್ಕೂ ಮುನ್ನ ಉತ್ತರ ಪ್ರದೇಶ ಸರ್ಕಾರಕ್ಕೂ ಇದೇ ಮಾದರಿಯ ಬ್ಯಾಗ್ ಗಳನ್ನು ನೀಡಿದ್ದರಿಂದ ಗೊಂದಲವುಂಟಾಗಿ ಈ ಅವಾಂತರ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಲು ಆದೇಶಿಸಿ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸುತ್ತೇವೆ ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಹೇಳಿದ್ದಾರೆ.