ಲಕ್ನೋ[ಜ.05]: BSP ನಾಯಕಿ ಮಾಯಾವತಿ ಹಾಗೂ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ 2019ರ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಲೆಕ್ಕಾಚಾರದ ಕೊನೆಯ ಘಟ್ಟಕ್ಕೆ ತಲುಪಿದ್ದಾರೆ. 

ಲಭ್ಯವಾದ ಮಾಹಿತಿ ಅನ್ವಯ ಅಖಿಲೇಶ್ ಯಾದವ್ ಈಗಾಗಲೇ ಪ್ರಸ್ತಾಪಿಸಲಾದ ಮೈತ್ರಿಯ ಕುರಿತಾಗಿ ಮಾತುಕತೆ ನಡೆಸಲು ಮಾಯಾವತಿಯನ್ನು ಭೇಟಿಯಾಗಿದ್ದಾರೆನ್ನಲಾಗಿದೆ. ಹೀಗಿದ್ದರೂ ಉಭಯ ಪಕ್ಷಗಳು ಈ ಕುರಿತಾಗಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಎರಡೂ ಪಕ್ಷಗಳು ತಲಾ 37-37 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂದು ಹೇಳಲಾಗಿದೆ. 

ಉತ್ತರ ಪ್ರದೇಶದಲ್ಲಿ ಒಟ್ಟು 80 ಕ್ಷೇತ್ರಗಳಿದ್ದು ಉಳಿದ 6 ಕ್ಷೇತ್ರಗಳನ್ನು ಕಾಂಗ್ರೆಸ್, ರಾಷ್ಟ್ರೀಯ ಲೋಕದಳ್ ಹಾಗೂ ಇತರ ಕಿರಿಯ ಪಕ್ಷಗಳಿಗೆಂದು ಉಳಿಸಲಾಗಿದೆ. ಒಂದು ವೆಳೆ ಈ ಮಹಾಘಟಬಂಧನ ಮುಂದುವರೆದರೆ ಬಿಜೆಪಿ ಸೇರಿದಂತೆ ಕಾಂಗ್ರೆಸ್‌ಗೂ ಬಹುದೊಡ್ಡ ಹೊಡೆತ ನೀಡಲಿದೆ.