ನವದೆಹಲಿ (ಫೆ.04): ಮುಂಬರಲಿರುವ ಉತ್ತರ ಪ್ರದೇಶ ಚುನಾವಣೆ ರಾಜ್ಯದ ಹಣೆಬರಹವನ್ನು ಬದಲಾಯಿಸಲು ಉತ್ತಮ ಅವಕಾಶ. ಬಿಜೆಪಿಗೆ ಮಾತ್ರ ರಾಜ್ಯದ ಭವಿಷ್ಯವನ್ನು ಬದಲಾಯಿಸಲು ಸಾಧ್ಯವೆಂದು ಅಮಿತ್ ಶಾ ಹೇಳಿದ್ದಾರೆ.
ನವದೆಹಲಿ (ಫೆ.04): ಮುಂಬರಲಿರುವ ಉತ್ತರ ಪ್ರದೇಶ ಚುನಾವಣೆ ರಾಜ್ಯದ ಹಣೆಬರಹವನ್ನು ಬದಲಾಯಿಸಲು ಉತ್ತಮ ಅವಕಾಶ. ಬಿಜೆಪಿಗೆ ಮಾತ್ರ ರಾಜ್ಯದ ಭವಿಷ್ಯವನ್ನು ಬದಲಾಯಿಸಲು ಸಾಧ್ಯವೆಂದು ಅಮಿತ್ ಶಾ ಹೇಳಿದ್ದಾರೆ.
ಚುನಾವಣಾ ರ್ಯಾಲಿಯನ್ನುದ್ದೇಶಿಸಿ, ಉತ್ತರ ಪ್ರದೇಶಕ್ಕೆ ಜಾತಿ, ಧರ್ಮದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸರ್ಕಾರ ಬೇಕಿಲ್ಲ. ಬದಲಿಗೆ ಕಾನೂನಿನ ಪ್ರಕಾರ ಕಾರ್ಯ ನಿರ್ವಹಿಸುವ ಸರ್ಕಾರದ ಅಗತ್ಯವಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅಖಿಲೇಶ್ ಯದವ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂದು ಶಾ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ 3 ಮತ್ತು 4 ನೇ ಹಂತದ ಸಂದರ್ಶನಕ್ಕೆ ಇತಿಶ್ರೀ ಹಾಡುತ್ತೇವೆ. ಮೆರಿಟ್ ಆಧಾರದ ಮೇಲೆ ಉದ್ಯೋಗ ನೀಡುತ್ತೇವೆ. ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಸಣ್ಣ ಹಾಗೂ ಮದ್ಯಮ ರೈತರಿಗೆ ಸಾಲ ಸೌಲಭ್ಯಗಳನ್ನು ನೀಡುತ್ತೇವೆ ಎಂದಿದ್ದಾರೆ.