ನವದೆಹಲಿ (ಫೆ.14): ರಾಜ್ಯದ ಅಭಿವೃದ್ಧಿ ಕೆಲಸಗಳನ್ನು ಪ್ರಶ್ನಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್,ವಾಕ್ ಪ್ರಹಾರ ನಡೆಸಿದ್ದಾರೆ. ಸಮಾಜವಾದಿ ಪಕ್ಷ ಈ ಬಾರಿ ಚುನಾವಣೆ ಗೆಲ್ಲಲು ಸಹಾಯ ನೀಡಿ ಎಂದು ಮತದಾರರಲ್ಲಿ ಕೇಳಿಕೊಂಡಿದ್ದಾರೆ.

“ ನಮ್ಮ ಕೆಲಸವನ್ನು ಅವರು ಪ್ರಶ್ನಿಸುತ್ತಾರೆ. ರಾಜ್ಯದಲ್ಲಿ ನಾವೇನೂ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಮೋದಿ ಹೇಳುತ್ತಾರೆ. ಉತ್ತರ ಪ್ರದೇಶದಲ್ಲಿ ಮೆಟ್ರೋ ಸೇವೆಯ ಬಗ್ಗೆ ಮೋದಿ ಪ್ರಶ್ನೆ ಎತ್ತಿದ್ದಾರೆ. ಗಾಜಿಯಾಬಾದ್, ನೋಯ್ಡಾ ಅಥವಾ ಲಕ್ನೋ ಇವುಗಳಲ್ಲಿ ಯಾವುದರಲ್ಲಿ ಮೊದಲು ಪ್ರಯಾಣಿಸಲು ಇಚ್ಚಿಸುತ್ತಾರೆ” ಎಂದು ಅಖಿಲೇಶ್ ಕೇಳಿದ್ದಾರೆ.

ಮೂಲಭೂತ ಸೌಕರ್ಯಗಳು ಮತ್ತು ರಸ್ತೆಗಳ ಬಗ್ಗೆ ಮಾತನಾಡುವ ಪ್ರಧಾನಿಯವರು ಮೊದಲು ಕಾಮಗಾರಿ ನಡೆದ ರಸ್ತೆಗಳಲ್ಲಿ ಸಂಚರಿಸಲಿ. ರಸ್ತೆಗಳ ಬಗ್ಗೆ ಮಾತನಾಡುವ ಯಾರೇ ಆಗಲಿ ಒಮ್ಮೆ ಸಂಚರಿಸಿದರೆ ನಮ್ಮ ಪಕ್ಷಕ್ಕೆ ಮತ ನೀಡುವುದು ಗ್ಯಾರೆಂಟಿ ಎಂದು ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದಾರೆ.