ಅಜೇಯ ಭಾರತ, ಅಟಲ ಬಿಜೆಪಿ-ಘೋಷವಾಕ್ಯ ಮೊಳಗಿಸಿದ ಪ್ರಧಾನಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Sep 2018, 10:04 PM IST
Ajay Bharat, Atal BJP  PM sets tone for 2019 polls at BJP meet
Highlights

ಮುಂದಿನ ಲೋಕಸಭಾ ಚುನಾವಣೆಗೆ ಸಕಲ ಸಜ್ಜಾಗಿರುವ ಬಿಜೆಪಿ ಹೊಸ ಘೋಷ ವಾಕ್ಯವೊಂದನ್ನು ಮೊಳಗಿಸಿದೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ರಣಕಹಳೆ ಊದಿದ್ದು, “ಅಜೇಯ ಭಾರತ, ಅಟಲ ಬಿಜೆಪಿ” ಎಂಬ ಘೋಷವಾಕ್ಯದಲ್ಲಿ ಅಡಿಯಿಡಲು ಮುಂದಾಗಿದೆ.

ನವದೆಹಲಿ[ಸೆ.9]  ಬಿಜೆಪಿ  ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, 48 ವರ್ಷಗಳ ಕಾಲ ಒಂದು ಕುಟುಂಬ ಮಾಡಿದ ಸಾಧನೆ ಹಾಗು ಪ್ರಸಕ್ತ ಸರಕಾರ ಕಳೆದ 48 ತಿಂಗಳಲ್ಲಿ ಮಾಡಿದ ಮಾಡಿದ ಸಾಧನೆಗಳನ್ನು ತುಲನೆ ಮಾಡಿ ನೋಡಬೇಕು ಎಂದು ಪ್ರಧಾನಿ ಹೇಳಿದ್ದಾರೆ ಎಂದರು.

ಮಾಜಿ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ನುಡಿನಮನ ಸಲ್ಲಿಸಿ, ಅಜೇಯ ಭಾರತ, ಅಟಲ ಬಿಜೆಪಿ ಎನ್ನುವ ಮೂಲಕ ದೇಶವನ್ನು ಯಾರಿಂದಲೂ ಒಡೆಯಲು ಬಿಡಬಾರದು ಮತ್ತು ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಎಂಬ ವಿವರ ನೀಡಿದರು.

ಮಹಾಘಟಬಂಧನದ ಹೆಸರಿನಲ್ಲಿ ಬಿಜೆಪಿಯ ಎದುರು ಎಲ್ಲ ಪಕ್ಷಗಳು ನಿಲ್ಲುತ್ತಿವೆ.  ವೈರಿಗಳೆಲ್ಲ ಒಂದಾಗಿ ನಮ್ಮ ಎದುರಿಗೆ ನಿಂತಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಜನತೆ ಕೈ ಹಿಡಿಯಲಿದೆ. ಜನರ ನಂಬಿಕೆ ಉಳಿಸಿಕೊಂಡು ಮುಂದೆ ಸಾಗುತ್ತೇವೆ ಎಂಬ ಭಾಷಣದ ಸಾರವನ್ನು ತಿಳಿಸಿದರು.

loader