ಫೋಟೋಗ್ರಾಫರ್‌ಗಳ ಕಾಟತಾಳಲಾರದೇ ನಟಿ ಐಶ್ವರ್ಯಾ ರೈ ಕಣ್ಣೀರಿಟ್ಟ ಘಟನೆ ಸೋಮವಾರ ನಡೆದಿದೆ.

ಮುಂಬೈ: ಫೋಟೋಗ್ರಾಫರ್‌ಗಳ ಕಾಟತಾಳಲಾರದೇ ನಟಿ ಐಶ್ವರ್ಯಾ ರೈ ಕಣ್ಣೀರಿಟ್ಟ ಘಟನೆ ಸೋಮವಾರ ನಡೆದಿದೆ.

ತಮ್ಮ ತಂದೆಯವರ ಜನ್ಮದಿನದ ನಿಮಿತ್ತ ಐಶ್ವರ್ಯಾ ರೈ, ಸೀಳು ತುಟಿಯ ಕೆಲ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲೆಂದು ತಾಯಿ ಬೃಂದಾ, ಮಗಳು ಆರಾಧ್ಯಾ ಜತೆ ಖಾಸಗಿ ಆಸ್ಪತ್ರೆಗೆ ಬಂದಿದ್ದರು.

ಈ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕೆಲ ಫೋಟೋಗ್ರಾಫರ್‌ಗಳು ಸತತವಾಗಿ ಐಶ್ವರ್ಯಾರ ಫೋಟೊಗಳನ್ನು ತೆಗೆಯಲು ಶುರುಮಾಡಿದರು.

ಇದರಿಂದ ಬೇಸರಗೊಂಡ ಐಶ್ವರ್ಯಾ, ‘ಇದೇನೂ ಪ್ರೀಮಿಯರ್ ಶೋ ಅಲ್ಲ. ಇದು ಖಾಸಗಿ ಕಾರ್ಯಕ್ರಮ’ ಎಂದು ಛಾಯಾಗ್ರಾಹಕರನ್ನು ದಬಾಯಿಸಿದರು.

ಕೊನೆಗೆ ಭಾವುಕರಾಗಿ ಕಣ್ಣೀರು ಸುರಿಸಲು ಶುರು ಮಾಡಿದರು.