ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್’ಸ್ಟೇನ್’ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದವರಲ್ಲಿ ಒಬ್ಬೊಬ್ಬರ ಹೆಸರು ಕೇಳಿ ಬರುತ್ತಿದೆ. ಹಾಲಿವುಡ್ ನಟಿ ಏಂಜಲಿನಾ ಜೋಲಿ ಸೇರಿದಂತೆ ಕೆಲವು ನಟಿಯರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕಳೆದ ವಾರ ಆರೋಪಿಸಿದ್ದರು. ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವಸುಂದರಿಯೊಬ್ಬರು ಕೂಡಾ ಹಾರ್ವೆನ್’ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ನವದೆಹಲಿ (ಅ.13): ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್’ಸ್ಟೇನ್’ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದವರಲ್ಲಿ ಒಬ್ಬೊಬ್ಬರ ಹೆಸರು ಕೇಳಿ ಬರುತ್ತಿದೆ. ಹಾಲಿವುಡ್ ನಟಿ ಏಂಜಲಿನಾ ಜೋಲಿ ಸೇರಿದಂತೆ ಕೆಲವು ನಟಿಯರು ತಮ್ಮ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕಳೆದ ವಾರ ಆರೋಪಿಸಿದ್ದರು. ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವಸುಂದರಿಯೊಬ್ಬರು ಕೂಡಾ ಹಾರ್ವೆನ್’ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.
ಬಾಲಿವುಡ್ ನಟಿಯನ್ನು ಹಾರ್ವೆನ್ ಏಕಾಂತವಾಗಿ ತನ್ನ ಬೆಡ್ ರೂಮಿಗೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಆಕೆಯ ಮ್ಯಾನೇಜರ್ ಇದನ್ನು ಅಲ್ಲಗಳೆದಿದ್ದು ಈ ರೀತಿಯಾಗಿ ನಡೆದೇ ಇಲ್ಲ ಎಂದಿದ್ದಾನೆ.
ನಾನು ಖ್ಯಾತ ನಟಿಯೊಬ್ಬರಿಗೆ ಹಲವಾರು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. ಒಮ್ಮೆ ನನ್ನ ಹತ್ತಿರ ಹಾರ್ವಿನ್ ಕೇಳಿದ; ಅವಳನ್ನು ಏಕಾಂತವಾಗಿ ಭೇಟಿ ಮಾಡುವುದು ಹೇಗೆ ಎಂದು ಬೇಡಿಕೆ ಇಟ್ಟಿದ್ದ. ನಾನು ಚೆನ್ನಾಗಿ ಬೈಯ್ದೆ. ನಾವು ಹೊಟೇಲಿಗೆ ಬಂದ ಮೇಲೆ ಅವನಿಗೆ ಒಂದು ಸ್ಟೀಲಿನ ಹಂದಿಯ ವಿಗ್ರಹ ಕಳುಹಿಸಿದೆ. ಆದರೆ ನಟಿಯನ್ನು ಭೇಟಿ ಮಾಡುವ ಒಂದು ಸಣ್ಣ ಅವಕಾಶವನ್ನೂ ನೀಡಿಲ್ಲ ಎಂದು ಮ್ಯಾನೇಜರ್ ಹೇಳಿದ್ದಾರೆ.
