‘‘ಬುಧವಾರದಿಂದ ಭಾರತದಾದ್ಯಂತ ಉಚಿತ 4ಜಿ ಸೇವೆ ಆರಂಭವಾಗಲಿದ್ದು,

ನವದೆಹಲಿ(.4): ಭಾರ್ತಿ ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಒಂದು ವರ್ಷ 9 ಸಾವಿರ ವೌಲ್ಯದವರೆಗಿನ ಮೊಬೈಲ್ ಡಾಟಾವನ್ನು ಉಚಿತವಾಗಿ ನೀಡುತ್ತಿದೆ. ಏರ್‌ಟೆಲ್‌ನ 4ಜಿ ನೆಟ್‌ವರ್ಕ್ ಗ್ರಾಹಕರು, 4ಜಿ ಮೊಬೈಲ್ ಬಳಕೆದಾರರು ಹಾಗೂ 3ಜಿ ಏರ್‌ಟೆಲ್ ಗ್ರಾಹಕರನ್ನು ಸೆಳೆಯಲು ಭಾರತದ ಅತ್ಯಂತ ದೊಡ್ಡ ಟೆಲಿಕಾಂ ಸಂಸ್ಥೆ ಈ ಆಫರ್ ನೀಡಿದೆ. ‘‘ಬುಧವಾರದಿಂದ ಭಾರತದಾದ್ಯಂತ ಉಚಿತ 4ಜಿ ಸೇವೆ ಆರಂಭವಾಗಲಿದ್ದು, ಫೆ.28ರವರೆಗೆ ಜಾರಿಯಿರಲಿದೆ. ಉಚಿತ ಡೇಟಾ ಆರ್‌ನಲ್ಲಿ ಗ್ರಾಹಕರು ಪ್ರತಿ ತಿಂಗಳು 3ಜಿಬಿ ಉಚಿತ ಡೇಟಾ ಪಡೆಯಲಿದ್ದಾರೆ. ಇದು 2017ರ ಡಿ.31ರವರೆಗೂ ಜಾರಿಯಿರಲಿದೆ. ಪೋಸ್ಟ್‌ಪೇಯ್ಡ್ ಹಾಗೂ ಪ್ರೀಪೇಯ್ಡ್ ಗ್ರಾಹಕರಿಗೆ ಪ್ರತ್ಯೇಕ ನಿಯಮಗಳಡಿ ಆಫರ್ ಲಭ್ಯವಿದೆ,’’ ಎಂದು ಸಂಸ್ಥೆ ತಿಳಿಸಿದೆ.