ಇಂದಿನಿಂದ ಏರ್ಪೋರ್ಟ್ ರೋಡ್ ಟೋಲ್ ಶುಲ್ಕ ಏರಿಕೆ

Airport Toll Hike
Highlights

ಬೆಂಗಳೂರಿನಿಂದ ಬಳ್ಳಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 7ರ ದೇವನಹಳ್ಳಿ ಟೊಲ್ ಪ್ಲಾಜಾದಲ್ಲಿ ಭಾನುವಾರದಿಂದಲೇ ಪರಿಷ್ಕೃತ ಟೋಲ್ ದರ ಜಾರಿಯಾಗಲಿದ್ದು, ವಾಹನ ಸವಾರರಿಗೆ 5 ಶುಲ್ಕ ಹೆಚ್ಚಳದ ಬಿಸಿ ತಟ್ಟಲಿದೆ.

ಬೆಂಗಳೂರು: ಬೆಂಗಳೂರಿನಿಂದ ಬಳ್ಳಾರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 7ರ ದೇವನಹಳ್ಳಿ ಟೊಲ್ ಪ್ಲಾಜಾದಲ್ಲಿ ಭಾನುವಾರದಿಂದಲೇ ಪರಿಷ್ಕೃತ ಟೋಲ್ ದರ ಜಾರಿಯಾಗಲಿದ್ದು, ವಾಹನ ಸವಾರರಿಗೆ 5 ಶುಲ್ಕ ಹೆಚ್ಚಳದ ಬಿಸಿ ತಟ್ಟಲಿದೆ.

2018ರ ಏ.1ರಿಂದ 2019 ಮಾ.31ರವರೆಗೆ ಪರಿಷ್ಕೃತ ಶುಲ್ಕ ಪಡೆಯಲು ನವಯುಗ ದೇವನಹಳ್ಳಿ ಟೊಲ್ ವೇ ಪ್ರೆವೇಟ್ ಲಿ.ಗೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿದ್ದು, ಒಂದು ವರ್ಷದ ಕಾಲ ಪರಿಷ್ಕೃತ ದರ ಜಾರಿಯಲ್ಲಿರಲಿದೆ.

ಪ್ರಸ್ತುತ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಹೊಗುವ ವಾಹನಗಳು ವಿಮಾನ ನಿಲ್ದಾಣದಿಂದ ಹಿಂತಿರುಗುವಾಗ 125 ರು. ಶುಲ್ಕ ಪಾವತಿಸಲಾಗುತ್ತಿತ್ತು. ಏ.1ರಿಂದ 5 ರು. ಹೆಚ್ಚಳವಾಗಲಿದ್ದು ಕಾರು, ಜೀಪು ಹಾಗೂ ವ್ಯಾನ್‌ಗಳು 130 ರು.ಗಳನ್ನು ಪಾವತಿಸಬೇಕಾಗಿದೆ.

ವಿಮಾನ ನಿಲ್ದಾಣಕ್ಕೆ ಇತ್ತಿಚೆಗಷ್ಟೇ ಅಭಿವೃದ್ಧಿಪಡಿಸಿರುವ ಪರ್ಯಾಯ ರಸ್ತೆಯಿಂದಾಗಿ ದೇವನಹಳ್ಳಿ ಟೋಲ್ ಆದಾಯ ದಿಢೀರ್ ಕುಸಿತವಾಗಿದೆ. ಈ ಕಾರಣದಿಂದಾಗಿ ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳಿಂದಲೂ ಶುಲ್ಕ ಪಡೆಯಲು ನವಯುಗ ದೇವನಹಳ್ಳಿ ಟೊಲ್ ವೇ ಸಂಸ್ಥೆ ಚಿಂತನೆ ನಡೆಸಿತ್ತು ಎಂದು ಸ್ಥಳೀಯ ವಾಹನ ಚಾಲಕರ ಆರೋಪವಾಗಿದೆ.

loader