ಪದ್ಮನಾಭ ದೇವಾಲಯದ ಪೈನ್ಕುನಿ ಮತ್ತು ಅಲ್ಪಾಸ್ಸಿ ಉತ್ಸವ 10ನೇ ದಿನವಾದ ಇಂದು ದೇವರ ಮೂರ್ತಿಗಳ ಮೆರವಣಿಗೆ ನಡೆಯಲಿದ್ದು, ಹಾಹಾಗಿ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.
ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಇವತ್ತು ಪದ್ಮನಾಭ ಸ್ವಾಮಿ ದೇವಸ್ಥಾನದ ದೇವರ ವಿಗ್ರಹಗಳ ‘ಸ್ನಾನ’ ಮಾಡಿಸುವ ಮೆರವಣಿಗೆ ರನ್ವೇ ಮೂಲಕವೇ ಸಾಗುವ ಕಾರಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಟುವಟಿಕೆಗಳನ್ನು 5 ತಾಸುಗಳ ಕಾಲ ಬಂದ್ ಮಾಡಲು ಪ್ಲಾನ್ ಮಾಡಲಾಗಿದೆ. ಪದ್ಮನಾಭ ದೇವಾಲಯದ ಪೈನ್ಕುನಿ ಮತ್ತು ಅಲ್ಪಾಸ್ಸಿ ಉತ್ಸವ 10ನೇ ದಿನವಾದ ಇಂದು ದೇವರ ಮೂರ್ತಿಗಳ ಮೆರವಣಿಗೆ ನಡೆಯಲಿದ್ದು, ಹಾಹಾಗಿ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.
ಸಮುದ್ರ ತೀರದಲ್ಲಿ ಧಾರ್ಮಿಕ ಸ್ನಾನಕ್ಕಾಗಿ ತೆರಳುವ ದೇವರಮೂರ್ತಿ ರನ್ವೇ ಹಾದು ಹೋಗುವವರೆಗೂ ಎರಡು ಪಕ್ಕದಲ್ಲಿ ಭಾರೀ ಬಿಗಿಭದ್ರತೆ ನಿಯೋಜನೆ ಮಾಡಲಾಗಿದೆ. ಶತಮಾನಗಳಿಂದ ಇದೇ ಹಾದಿಯಲ್ಲಿ ಮೆರವಣಿಗೆ ಸಾಗುತ್ತಿರುವ ಹಿನ್ನೆಲೆಯಲ್ಲಿ ಏರ್ಫೋರ್ಟ್ ನಿರ್ಮಾಣದ ಬಳಿಕವೂ ಅದೇ ಮಾರ್ಗದಲ್ಲಿ ಬರುವ ರನ್ವೇ ಮೂಲಕ ಸಾಗುವ ಸಂಪ್ರದಾಯ ಮುಂದುವರೆಸಿಕೊಂಡು ಬರಲಾಗಿದೆ.
