ನಿಯಮ ಉಲ್ಲಂಘನೆ : ಏರ್ ಏಷ್ಯಾ ಸಿಇಒ ಸಿಬಿಐ ವಶಕ್ಕೆ

AirAsia CEO Tony Fernandes others booked by CBI
Highlights

ಕಂಪನಿ ನಿರ್ದೇಶಕರು ಅಂತರರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಪರವಾನಗಿ ಪಡೆಯಲು ನಿಯಮ ಉಲ್ಲಂಘನೆ ಹಾಗೂ ವಿದೇಶಿ ಹೂಡಿಕೆ ಪ್ರಚಾರ ಮಂಡಳಿಯ ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನವದೆಹಲಿ(ಮೇ.29): ಅಂತರರಾಷ್ಟ್ರೀಯ ಹಾರಾಟ ಪರವಾನಗಿಯನ್ನು ಪಡೆಯುವ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಏರ್ ಏಷ್ಯಾ ಸಮೂಹ ಸಂಸ್ಥೆಯ ಸಿಇಒ ಟೋನಿ ಫೆರ್ನಾಂಡಿಸ್ ಸೇರಿದಂತೆ 6 ಮಂದಿಯನ್ನು ಸಿಬಿಐ ಬಂಧಿಸಿದೆ.
ಕಂಪನಿ ನಿರ್ದೇಶಕರು ಅಂತರರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಪರವಾನಗಿ ಪಡೆಯಲು ನಿಯಮ ಉಲ್ಲಂಘನೆ ಹಾಗೂ ವಿದೇಶಿ ಹೂಡಿಕೆ ಪ್ರಚಾರ ಮಂಡಳಿಯ ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಏರ್ ಏಷ್ಯಾ  ಪರವಾನಗಿ ಪಡೆಯಲು 5 ವರ್ಷಗಳ ಅನುಭವ ಹಾಗೂ 20 ವಿಮಾನಗಳನ್ನು ಹೊಂದಿರಬೇಕಾಗಿರುತ್ತದೆ. ಇದು 5/20 ರ ನಿಯಮವಾಗಿದೆ. ಪರವಾನಗಿಗಾಗಿ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
ಏರ್ ಏಷ್ಯಾ ಸಂಸ್ಥೆಯು ದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ 6 ಕೇಂದ್ರಗಳನ್ನು ಹೊಂದಿದೆ. ಸಿಇಒ ಟೋನಿ ಫೆರ್ನಾಂಡಿಸ್ ಸರ್ಕಾರಿ ಅಧಿಕಾರಿಗಳೊಂದಿಗೆ ಲಾಬಿ ನಡೆಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.  

loader