ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕದ ಪ್ರಮಾಣವು 40-100 ಇದೆ. ಪೀಣ್ಯದಲ್ಲಿ ಮಾತ್ರವೇ ಶನಿವಾರ ಮಧ್ಯಾಹ್ನ 108ಕ್ಕೆ ದಾಖಲಾಗಿದ್ದು ಗರಿಷ್ಠವೆನಿಸಿದೆ. ಪೀಣ್ಯ ಸೇರಿದಂತೆ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಎಕ್ಯೂಐ ಅಂಕಿ ದಾಖಲಾಗಿದೆ. ಸಾಣೆ ಗುರುವನಹಳ್ಳಿ, ರೈಲ್ವೆ ಸ್ಟೇಷನ್ ಮತ್ತು ವಿಠಲ್ ಮಲ್ಯ ರಸ್ತೆಯ ಎಕ್ಯೂಐ ವಿವರಗಳು ಲಭ್ಯವಿವೆ.

ಬೆಂಗಳೂರು(ನ. 11): ಹಲವು ದಿನಗಳಿಂದ ದೇಶದ ರಾಜಧಾನಿ ದೆಹಲಿಯ ವಾಯುಮಾಲಿನ್ಯದ್ದೇ ಸುದ್ದಿ. ಕೆಲವೇ ಮೀಟರ್'ಗಳಷ್ಟು ದೂರದ ಸ್ಥಳವು ಕಣ್ಣಿಗೇ ಕಾಣದಷ್ಟು ಮಾಲಿನ್ಯದ ಹೊಗೆಗಳು ದೆಹಲಿಯನ್ನಾವರಿಸಿವೆ. ಪ್ರಪಂಚದಲ್ಲೇ ಅತ್ಯಂತ ಕೆಟ್ಟ ವಾಯುಮಾಲಿನ್ಯದ ಪರಿಸ್ಥಿತಿ ದೆಹಲಿಯದ್ದಾಗಿತ್ತು. ಅಲ್ಲಿ ಒಂದು ಹಂತದಲ್ಲಿ ವಾಯು ಗುಣಮಟ್ಟ ಸೂಚ್ಯಂಕ, ಅಥವಾ ಏರ್ ಕ್ವಾಲಿಟಿ ಇಂಡೆಕ್ಸ್ (ಎಕ್ಯೂಐ) 700 ದಾಟಿತ್ತು. ಇದು ತುರ್ತುಪರಿಸ್ಥಿತಿಯೇ. ಇದೀಗ ದೆಹಲಿಯಲ್ಲಿ ಎಕ್ಯೂಐ ಪ್ರಮಾಣವು ಸರಾಸರಿ 400 ಇದೆ.

ಇನ್ನು, ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕದ ಪ್ರಮಾಣವು 40-100 ಇದೆ. ಪೀಣ್ಯದಲ್ಲಿ ಮಾತ್ರವೇ ಶನಿವಾರ ಮಧ್ಯಾಹ್ನ 108ಕ್ಕೆ ದಾಖಲಾಗಿದ್ದು ಗರಿಷ್ಠವೆನಿಸಿದೆ. ಪೀಣ್ಯ ಸೇರಿದಂತೆ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಎಕ್ಯೂಐ ಅಂಕಿ ದಾಖಲಾಗಿದೆ. ಸಾಣೆ ಗುರುವನಹಳ್ಳಿ, ರೈಲ್ವೆ ಸ್ಟೇಷನ್ ಮತ್ತು ವಿಠಲ್ ಮಲ್ಯ ರಸ್ತೆಯ ಎಕ್ಯೂಐ ವಿವರಗಳು ಲಭ್ಯವಿವೆ. ಶನಿವಾರ ಮಧ್ಯಾಹ್ನ ಈ ಮೂರು ಸ್ಥಳಗಳಲ್ಲಿ 43, 83 ಮತ್ತು 40 ಎಕ್ಯೂಐ ದಾಖಲಾಗಿದೆ. ಈ ಅಂಕಿ-ಅಂಶದ ಹಿನ್ನೆಲೆಯಲ್ಲಿ ಬೆಂಗಳೂರು ಸದ್ಯದ ಮಟ್ಟಿಗೆ ಸೇಫ್ ಆಗಿದೆ.

ಎಕ್ಯೂಐ ಮತ್ತು ಆರೋಗ್ಯ ಎಚ್ಚರಿಕೆ:

0-50: ಆರೋಗ್ಯಕರ ವಾತಾವರಣ

51-100: ಸಾಮಾನ್ಯವಾಗಿ ಅಪಾಯವಲ್ಲದ ವಾತಾವರಣ; ಆಸ್ತಮಾದಂಥ ತೊಂದರೆ ಇರುವವರು ಹೆಚ್ಚು ಹೊತ್ತು ಹೊರಗಿರಬಾರದು.

101-150: ಅಪಾಯದ ಮಟ್ಟದ ಹೊಸ್ತಿಲಲ್ಲಿರುವ ವಾತಾವರಣ; ಸಾಮಾನ್ಯ ಆರೋಗ್ಯವಿರುವವರಿಗೆ ಅಷ್ಟೇನೂ ತೊಂದರೆಯಲ್ಲ.

151-200: ಅಪಾಯಕಾರಿ ವಾಯುಮಾಲಿನ್ಯ ಮಟ್ಟ; ಪ್ರತಿಯೊಬ್ಬರಿಗೂ ಬಾಧಿಸುವ ಮಾಲಿನ್ಯ. ಆಸ್ತಮಾದಂತಹ ಉಸಿರಾಟದ ತೊಂದರೆಯ ರೋಗಿಗಳು ಬಹಳ ಹುಷಾರಾಗಿರಬೇಕು.

201-300: ಬಹಳ ಅಪಾಯಕಾರಿ ಸ್ಥಿತಿ; ತುರ್ತು ಸ್ಥಿತಿ; ಪ್ರತಿಯೊಬ್ಬರಿಗೂ ತೊಂದರೆ.

300ಕ್ಕಿಂತ ಹೆಚ್ಚು: ಅತ್ಯಂತ ಅಪಾಯ;

(ಮಾಹಿತಿ: aqicn)