ಇಂದು ಮನ್ ಕೀ ಬಾತ್ ಕಾರ್ಯಕ್ರಮ ಯಾವುದೇ ಖರ್ಚಿಲ್ಲದೇ ಹೇರಳ ಲಾಭಗಳಿಸುತ್ತಿದೆ.

ನವದೆಹಲಿ(ಫೆ.18): ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದ ಪ್ರಚಾರಕ್ಕೆ ಆಲ್ ಇಂಡಿಯಾ ರೇಡಿಯೋ ಪ್ರಾರಂಭದ ವಾರಗಳಲ್ಲಿ ಜಾಹೀರಾತು ನೀಡಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಜಾಹೀರಾತು ನೀಡುವುದಕ್ಕೆ ಬ್ರೇಕ್ ಹಾಕಿದ್ದರು ಎಂದು ಆಕಾಶವಾಣಿ ನಿರ್ದೇಶಕ ಜನರಲ್ ಫಯಾಜ್ ಶಹರ್'ರ್ಯಾರ್ ಹೇಳಿದ್ದಾರೆ.

2014 ಅಕ್ಟೋಬರ್ 3ರಂದು ಮನ್ ಕೀ ಬಾತ್ ಕಾರ್ಯಕ್ರಮ ಬಿಡುಗಡೆ ಮಾಡಲಾಯಿತು. ಮನ್ ಕೀ ಬಾತ್ ಕಾರ್ಯಕ್ರಕ್ಕೆ ಕೇಳುಗರನ್ನು ಸೆಳೆಯುವ ಸಲುವಾಗಿ ಮತ್ತು ಹೆಚ್ಚಿನ ಆದಾಯಗಳಿಸುವ ನಿಟ್ಟಿನಿಂದ ಜಾಹೀರಾತು ನೀಡುವ ನಿರ್ಧಾರವನ್ನು ಆಕಾಶವಾಣಿ ಕೈಗೊಂಡಿತ್ತು.

ಆರಂಭಿಕ ವಾರಗಳಲ್ಲಿ ಪತ್ರಿಕೆಗಳ 1012 ಆವೃತ್ತಿಗಳಲ್ಲಿ ಜಾಹೀರಾತು ನೀಡಲಾಗಿತ್ತು. ಬಳಿಕ ಜಾಹೀರಾತನ್ನು ನಿಲ್ಲಿಸಲಾಯಿತು. ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದಕ್ಕೆ ಪ್ರಧಾನಿ ವಿರುದ್ಧವಾಗಿದ್ದರು.

ಇಂದು ಮನ್ ಕೀ ಬಾತ್ ಕಾರ್ಯಕ್ರಮ ಯಾವುದೇ ಖರ್ಚಿಲ್ಲದೇ ಹೇರಳ ಲಾಭಗಳಿಸುತ್ತಿದೆ. 2015-16ರಲ್ಲಿ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಜಾಹೀರಾತಿನಿಂದ 4.78 ಕೋಟಿ ರು.ಆದಾಯ ಲಭಿಸಿದೆ ಎಂದು ಹೇಳಿದ್ದಾರೆ.