Asianet Suvarna News Asianet Suvarna News

ವಿಶ್ವದಾಖಲೆ ಬರೆದ ಏರ್ ಇಂಡಿಯಾ

ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ ಕೋ ಗೆ ನಿಲುಗಡೆ ರಹಿತ ಪ್ರಯಾಣ  ಮಾಡುವ ಮೂಲಕ ದಾಖಲೆ ಬರೆದಿದೆ.

Air Indias Delhi San Francisco flight sets record for flying the longest

ನವದೆಹಲಿ(ಅ.23): ಏರ್ ಇಂಡಿಯಾ ಹೊಸ ದಾಖಲೆ ಬರೆದಿದೆ. ದೆಹಲಿ ಟು ಸ್ಯಾನ್ ಫ್ರಾನ್ಸಿಸ್ಕೋ ನಾನ್ ಸ್ಟಾಪ್ ಪ್ರಯಾಣ ಶುರುವಾಗಿ ಬರೋಬ್ಬರಿ 15 ಸಾವಿರದ 300 ಕಿಲೋ ಮೀಟರ್ ದೂರ ನಿಲುಗಡೆ ರಹಿತ ಹಾರಾಟದಿಂದ ಎಮಿರೇಟ್ಸ್ ಸಂಸ್ಥೆಯ ಹೆಸರಿನಲ್ಲಿದ್ದ ದಾಖಲೆಯನ್ನ ತನ್ನ ಹೆಸರಿಗೆ ಬರೆಸಿಕೊಂಡಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ ಕೋ ಗೆ ನಿಲುಗಡೆ ರಹಿತ ಪ್ರಯಾಣ  ಮಾಡುವ ಮೂಲಕ ದಾಖಲೆ ಬರೆದಿದೆ. ದೆಹಲಿಯಿಂದ-ಸ್ಯಾನ್ ಫ್ರಾನ್ಸಿಸ್ಕೋ ನಡುವಿನ ಸುಮಾರು 15,300 ಕಿ.ಮೀ. ದೂರವನ್ನು ಯಾವುದೇ ನಿಲುಗಡೆ ಇಲ್ಲದೇ ಕೇವಲ 14.5 ಗಂಟೆಯಲ್ಲಿ ಪ್ರಯಾಣಿಸುವ ಮೂಲಕ ಏರ್ ಇಂಡಿಯಾ  ವಿಮಾನಯಾನ ಸಂಸ್ಥೆ ಹೊಸ ದಾಖಲೆ ಬರೆದಿದೆ. ಹೀಗಾಗಿ ಹಿಂದೆ ಎಮಿರೇಟ್ಸ್ ಸಂಸ್ಥೆಯ ಹೆಸರಲ್ಲಿ ಇದ್ದ ವಿಶ್ವದಾಖಲೆಯನ್ನ ಏರ್ ಇಂಡಿಯಾ ತನ್ನ ಹೆಸರಿಗೆ ಬರೆಸಿಕೊಂಡಿದೆ.

ನಾಲ್ಕು ಪೈಲಟ್'ಗಳ ಶ್ರಮ

ಏರ್ ಇಂಡಿಯಾದ ಈ  ದಾಖಲೆಯಲ್ಲಿ ನಾಲ್ಕು ಪೈಲಟ್ ಗಳ ಶ್ರಮವಿದೆ.. ಪೈಲಟ್ ಗಳಾದ ಕ್ಯಾಪ್ಟನ್ ರಜನೀಶ್ ಶರ್ಮಾ, ಗೌತಮ್ ವರ್ಮಾ, ಎಂಎ ಖಾನ್ ಹಾಗೂ ಎಸ್ ಎಂ ಪಲೇಕರ್ ಅವರ ಪಾಳಿ ಲೆಕ್ಕಾಚಾರದಲ್ಲಿ  ಕಾರ್ಯ ನಿರ್ವಹಿಸಿದ್ದಾರೆ. ಇವರಿಗೆ ವಿಮಾನದ 10 ಸಿಬ್ಬಂದಿ ಕೂಡ ಸಾಥ್ ನೀಡಿದ್ದಾರೆ. ಒಟ್ನಲ್ಲಿ ಏರ್ ಇಂಡಿಯಾ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

 

Follow Us:
Download App:
  • android
  • ios