ಏರೋ ಇಂಡಿಯಾದಲ್ಲಿ ಲೋಹದ ಹಕ್ಕಿಗಳ ಕಲರವ. ಯುದ್ಧದಲ್ಲಿ ಬಳಸುವ ಪ್ರತಿಷ್ಠಿತ ವಿಮಾನಗಳು ಯಲಹಂಕದ ವಾಯುನಬೆಲೆಗೆ ಬಂದಿಳಿದಿದ್ದವು. ವಿಶ್ವದ ಬಲಾಡ್ಯ ರಕ್ಷಣಾ ದೇಶಗಳಿಗೆ ತಮ್ಮ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡುವ ಉದ್ದೇಶವಾದರೆ, ಎಚ್ ಎ ಎಲ್ ನಿರ್ಮಿತ ತೇಜಸ್ ಮತ್ತು ಡಿ ಆರ್ ಡಿ ಓ ಅಭಿವೃದ್ಧಿ ಪಡಿಸಿದ ತಂತ್ರಜ್ಙಾನ ರಫ್ತು ದೇಶದ ಆಧ್ಯತೆ.
ಬೆಂಗಳೂರು(ಫೆ.14): ಏರೋ ಇಂಡಿಯಾ 2017 ರಲ್ಲಿ ಹಲವು ಆಕರ್ಷಣೆಗಳಿವೆ. ಅದರಲ್ಲಿ ಕಣ್ಣು ಕುಕ್ಕಿದ್ದು ಮಾತ್ರ ಫ್ರಾನ್ಸ್ ನಿರ್ಮಿತ ರಾಫೆಲ್ ಮತ್ತು ಅಮೆರಿಕದ ಎಫ್ 16 ವಿಮಾನಗಳು ಸಿಲಿಕಾನ್ ಸಿಟಿಯ ನಭದಲ್ಲಿ ಹಾರಾಡಿದವು. ಎಲ್ಲಕ್ಕಿಂತ ಹೆಚ್ಚಿನದಾಗಿ ಇಡೀ ದೇಶದ ಹೆಮ್ಮೆ ತೇಜಸ್ ಏರೋ ಇಂಡಿಯಾದಲ್ಲಿ ಕಂಗೊಳಿಸಿತು. ಇನ್ನು ಡಿಆರ್'ಡಿಓ ಅಭಿವೃದ್ದಿ ಪಡಿಸಿರುವ ಸರವೇಕ್ಷಣಾ ವಿಮಾನವನ್ನು ವಾಯುಸೇನೆಗೆ ಸೇರ್ಪಡೆ ಮಾಡಿದ್ದು ಇಡೀ ದಿನದ ವಿಶೇಷ.
ಏರೋ ಇಂಡಿಯಾದಲ್ಲಿ ಲೋಹದ ಹಕ್ಕಿಗಳ ಕಲರವ. ಯುದ್ಧದಲ್ಲಿ ಬಳಸುವ ಪ್ರತಿಷ್ಠಿತ ವಿಮಾನಗಳು ಯಲಹಂಕದ ವಾಯುನಬೆಲೆಗೆ ಬಂದಿಳಿದಿದ್ದವು. ವಿಶ್ವದ ಬಲಾಡ್ಯ ರಕ್ಷಣಾ ದೇಶಗಳಿಗೆ ತಮ್ಮ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡುವ ಉದ್ದೇಶವಾದರೆ, ಎಚ್ ಎ ಎಲ್ ನಿರ್ಮಿತ ತೇಜಸ್ ಮತ್ತು ಡಿ ಆರ್ ಡಿ ಓ ಅಭಿವೃದ್ಧಿ ಪಡಿಸಿದ ತಂತ್ರಜ್ಙಾನ ರಫ್ತು ದೇಶದ ಆಧ್ಯತೆ.
ಏರೋ ಇಂಡಿಯಾದ ಸ್ವೀಟೆಸ್ಟ್ ಅಟ್ರಾಕ್ಷನ್ ಅಂದ್ರೆ ಅದು ತೇಜಸ್ ಯುದ್ಧ ವಿಮಾನ. ಸಂಪೂರ್ಣ ದೇಶೀಯ ತಂತ್ರಜ್ಙಾನವನ್ನು ಬಳಸಿ ಎಚ್ಎಎಲ್ ಈ ಯುದ್ಧ ವಿಮಾನವನ್ನು ನಿರ್ಮಿಸಿದೆ. ಈಗಾಗಲೇ ವಾಯುಪಡೆಗೆ ಮೂರು ವಿಮಾನಗಳು ಸೇರ್ಪಡೆಯಾಗಿದ್ದು, ಆ ವಿಮಾನಗಳು ಏರ್ ಶೋದಲ್ಲಿ ತಮ್ಮ ಕರಾಮತ್ತು ತೋರಿಸಿದವು. ಲಘು ಯುದ್ಧ ವಿಮಾನವಾಗಿರುವ ತೇಜಸ್ 50 ಸಾವಿರ ಅಡಿ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದ್ದು, ಬೆಳಕಿಗಿಂತಲೂ ವೇಗವಾಗಿ ಕ್ಷಪಣಿ ಲಾಂಚ್ ಮಾಡುವಷ್ಟು ಶಕ್ತವಾಗಿದೆ. ಈ ಯುದ್ಧ ವಿಮಾನ ಖರೀದಿಗೆ ವಿಯಟ್ನಾಂ, ಮಯನ್ಮಾರ್ ನಂತಹ ದೇಶಗಳು ಆಸಕ್ತಿ ತೋರಿವೆ.
ಆಗಸದಲ್ಲಿ ಅಬ್ಬರಿಸಿತು ಎಫ್ 16!
ಕಳೆದೊಂದು ವರ್ಷದಿಂದ ರಕ್ಷಣಾ ಕ್ಷೇತ್ರದಲ್ಲಿ ಕೇಳಿ ಬರುತ್ತಿರೋ ಹೆಸರು ರಫೇಲ್. ಫ್ರಾನ್ಸ್ ಡಸಾಲ್ಟ್ ಏವಿಯೇಷನ್ ನಿರ್ಮಿಸಿರುವ ಈ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನ ಏರ್ ಶೋದ ಮತ್ತೊಂದು ಆಕರ್ಷಣೆ. 9.3 ಟನ್ ಶಸ್ತ್ರಾಸ್ರ ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಈ ವಿಮಾನ. ಫ್ರಾನ್ಸ್ ನ ಫೈಲಟ್ ಗಳು ರಫೇಲ್ ಅನ್ನು ಮುಗಿಲೆತ್ತರಕ್ಕೆ ಹಾರಿಸಿ ತಮ್ಮ ಸಾಮರ್ಥ್ಯ ಅನಾವರಣಗೊಳಿಸಿತು. ಈಗಾಗಲೇ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದವಾಗಿರೋದು. ಇನ್ನು ಯುದ್ಧರಂಗದ ಗಿಡುಗ ಅಂತಲೇ ಖ್ಯಾತಿ ಹೊಂದಿರುವ ಎಫ್ 16 ಯುದ್ಧ ವಿಮಾನ ಬಾರೀ ಸದ್ದಿನೊಂದಿಗೆ ಆಗಸದಲ್ಲಿ ಹಾರಾಟ ನಡೆಸಿ ನೋಡುಗರ ಹುಬ್ಬೇರಿಸುವಂತೆ ಮಾಡಿತು.
ಇನ್ನು ಡಿಆರ್'ಡಿಓ ಅಭಿವೃದ್ಧಿಪಡಿಸಿರುವ ಅವಾಕ್ಸ್ ಸರ್ವೇಕ್ಷಣಾ ಯುದ್ಧ ವಿಮಾನವನ್ನು ಏರೋ ಇಂಡಿಯಾದಲ್ಲಿ ರಕ್ಷಣಾ ಸಚಿವ ಪರಿಕ್ಕರ್ ವಾಯುಸೇನೆಗೆ ಹಸ್ತಾಂತರಿದರು. ನೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕ್ಷಿಪಣಿ ದಾಳಿ ಮತ್ತು ಡ್ರೋನ್ ದಾಳಿಯನ್ನು ಗುರುತಿಸಿ ಸಂದೇಶ ನೀಡುವ ಅರ್ಲಿ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್ ತಂತ್ರಜ್ಙಾನ ಈ ವಿಮಾನದಲ್ಲಿದೆ. 240 ಡಿಗ್ರಿ ಕೋನದಲ್ಲಿ ಇದು ಎದುರಾಳಿ ವಿಮಾನಗಳ ಮೇಲೆ ಕಣ್ಣಿಡಲಿದೆ. ಇದೇ ರೀತಿಯ ಇನ್ನು ಐದು ಅವಾಕ್ಸ್ ವಿಮಾನಗಳು ಮುಂದಿನ ಕೆಲ ವರ್ಷಗಳಲ್ಲಿ ವಾಯು ಸೇನೆಗೆ ಸೇರ್ಪಡೆಯಾಗಲಿವೆ. ಈ ಆಕರ್ಷಣೆಗಳ ಜೊತೆಗೆ 30ನ ದೇಶಗಳ 72 ಯುದ್ಧ ವಿಮಾನಗಳು ಏರ್ ಶೋದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿ ನೋಡುಗರ ಉಬ್ಬೇರುವಂತೆ ಮಾಡಿದವು.
ವರದಿ: ಶಶಿಶೇಖರ್ ಮತ್ತು ಮುತ್ತಪ್ಪ ಲಮಾಣಿ, ಸುವರ್ಣ ನ್ಯೂಸ್
