ಶಿವಸೇನೆ ಸಂಸದ ರವೀಂದ್ರ ಗಾಯಕ್ ವಾಡ್ ಗೆ ಏರ್ ಇಂಡಿಯಾ ಮತ್ತೊಮ್ಮೆ ಟಿಕೆಟನ್ನು ರದ್ದುಪಡಿಸಿದೆ. ಅವರಿಗೆ ಅವಕಾಶ ಕೊಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ನವದೆಹಲಿ (ಮಾ.28): ಶಿವಸೇನೆ ಸಂಸದ ರವೀಂದ್ರ ಗಾಯಕ್ ವಾಡ್ ಗೆ ಏರ್ ಇಂಡಿಯಾ ಮತ್ತೊಮ್ಮೆ ಟಿಕೆಟನ್ನು ರದ್ದುಪಡಿಸಿದೆ. ಅವರಿಗೆ ಅವಕಾಶ ಕೊಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ರವೀಂದ್ರ ಗಾಯಕ್ ವಾಡ್ ಮುಂಬೈಯಿಂದ ದೆಹಲಿಗೆ ತೆರಳಲು ಕಾಲ್ ಸೆಂಟರ್ ಮೂಲಕ ಬುಕ್ ಮಾಡಿದ್ದರು.ನಾಳೆ ಬೆಳಿಗ್ಗೆ 8 ಗಂಟೆಗೆ ಎಐ 806 ವಿಮಾನದಲ್ಲಿ ಪ್ರಯಾಣಿಸಲು ಬಯಸಿದ್ದರು.
ಏರ್ ಇಂಡಿಯಾ ಸಿಬ್ಬಂದಿ 60 ವರ್ಷದ ವ್ಯಕ್ತಿಯೊಬ್ಬರಿಗೆ ರವೀಂದ್ರ ಗಾಯಕ್ ವಾಡ್ ಚಪ್ಪಲಿಯಿಂದ ಬಾರಿಸಿ ಅಮಾನವೀಯವಾಗಿ ವರ್ತಿಸಿದ್ದರು. ಬಳಿಕ ಕ್ಷಮೆಯಾಚಿಸಲು ನಿರಾಕರಿಸಿದ್ದರು. ಹಾಗಾಗಿ ನಮ್ಮ ವಿಮಾನಗಳಲ್ಲಿ ಪ್ರಯಾಣಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಏರ್ ಇಂಡಿಯಾ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಏರ್ ಇಂಡಿಯಾ ಜೊತೆ ಖಾಸಗಿ ವಿಮಾನ ಸಂಸ್ಥೆಗಳಾದ ಜೆಟ್, ಇಂಡಿಗೋ, ಸ್ಪೈಸ್ ಜೆಟ್, ಗೋ ಏರ್ ಮತ್ತು ವಿಸ್ತಾರ ಸಂಸ್ಥೆಗಳು ಕೂಡಾ ತಮ್ಮ ವಿಮಾನಗಳಲ್ಲಿ ಗಾಯಕ್ ವಾಡ್ ಪ್ರಯಾಣಿಸಲು ಅವಕಾಶ ನೀಡದಿರಲು ನಿರ್ಧರಿಸಿದೆ.
