ಬಳುಕುವ ಬಳ್ಳಿಯಂಥ ಮೈಮಾಟ ಪ್ರದರ್ಶಿಸುವ ಗಗನಸಖಿಯರ ಸೊಂಟದ ಸುತ್ತಳತೆ ಹೆಚ್ಚಾಗಿ ಧಡೂತಿಯರಾದ ಕಾರಣಕ್ಕೆ 57 ಮಂದಿ ಏರ್ ಹೋಸ್ಟೆಸ್‍ಗಳಿಗೆ ಏರ್ ಇಂಡಿಯಾ ವಿಮಾನದಿಂದ ಕೊಕ್ ನೀಡಿದೆ.
ನವದೆಹಲಿ (ಜ.21): ಬಳುಕುವ ಬಳ್ಳಿಯಂಥ ಮೈಮಾಟ ಪ್ರದರ್ಶಿಸುವ ಗಗನಸಖಿಯರ ಸೊಂಟದ ಸುತ್ತಳತೆ ಹೆಚ್ಚಾಗಿ ಧಡೂತಿಯರಾದ ಕಾರಣಕ್ಕೆ 57 ಮಂದಿ ಏರ್ ಹೋಸ್ಟೆಸ್ಗಳಿಗೆ ಏರ್ ಇಂಡಿಯಾ ವಿಮಾನದಿಂದ ಕೊಕ್ ನೀಡಿದೆ.
ತೂಕ ಕಡಿಮೆ ಮಾಡಿಕೊಳ್ಳುವರೆಗೂ ಕಚೇರಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಸ್ಥೂಲಕಾಯವಾಗಿರುವ ದೇಹವನ್ನು ನೀಳಕಾಯವಾಗಿಸದೇ ಹೋದರೆ ವಿಮಾನದ ಬದಲಿಗೆ ಕಚೇರಿಯಲ್ಲೇ ಕಾಯಂ ಆಗಿ ಇರಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಲಾಗಿದೆ. ವಿಮಾನದಲ್ಲಿ ವಿಹರಿಸುತ್ತಾ ಗಣ್ಯರಿಗೆ ಉಪಚರಿಸುತ್ತಾ ಕೈತುಂಬಾ ಸಂಬಳ ಮತ್ತು ಹೆಚ್ಚುವರಿ ಭತ್ಯೆಗಳನ್ನು ಅನುಭವಿಸುತ್ತಿದ್ದ ಗಗನಸಖಿಯರು ಏರ್ ಇಂಡಿಯಾ ಸಂಸ್ಥೆಯ ಈ ಸೂಚನೆಯಿಂದ ಬೆಸ್ತು ಬಿದ್ದಿದ್ದಾರೆ.
