ಈ ಇಲಾಖೆಯ ನೌಕರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ಇವರ ಗ್ರಾಚ್ಯುಟಿ ಮಿತಿಯನ್ನು ದ್ವಿಗುಣ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದ್ದು, 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರ ಲಾಭವನ್ನು ಸಾವಿರಾರು ಸಂಖ್ಯೆಯ ಏರ್ ಇಂಡಿಯಾ ನೌಕರರು ಪಡೆದುಕೊಳ್ಳಲಿದ್ದಾರೆ. 

ನವದೆಹಲಿ : ಏರ್ ಇಂಡಿಯಾವೂ ಇದೀಗ ತನ್ನ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ಇದುವರೆಗೂ ಕೂಡ 10 ಲಕ್ಷವಿದ್ದ ನೌಕರರ ಗ್ರಾಚ್ಯುಟಿ ಮಿತಿಯನ್ನು 20 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏರ್ ಇಂಡಿಯಾ ಸಂಸ್ಥೆಯು ಈ ಬಗ್ಗೆ ಪತ್ರ ಬರೆದಿದ್ದು, ಜೂನ್ 26 ರಂದೆ ಈ ಬಗ್ಗೆ ಸ್ಪಷ್ಟ ಪಡಿಸಿದೆ. ಉದ್ಯೋಗಿಗಳ ಗ್ರಾಚ್ಯುಟಿ ಮಿತಿಯೀಗ ದ್ವಿಗುಣ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎಂದು ತಿಳಿಸಿದೆ. ಮೇ 21 ರಂದು ಈ ಬಗ್ಗೆ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಈ ಬಗ್ಗೆ ಅಂಕಿತ ನೀಡಲಾಗಿದೆ. 

ಗ್ರಾಚ್ಯಟಿ ಮಿತಿ ಏರಿಕೆ ಅನುಕೂಲತೆಯನ್ನು ಒಟ್ಟು 6500 ನೌಕರರು ಪಡೆದುಕೊಳ್ಳಲಿದ್ದಾರೆ. ಈ ಹಿಂದೆ ಗ್ರಾಚ್ಯುಟಿ ಮೊತ್ತದ ಮಿತಿಯು 10 ಲಕ್ಷದಷ್ಟಿತ್ತು. ಆದರೆ ಇನ್ನುಮುಂದೆ ಗ್ರಾಚ್ಯುಟಿ ಮೊತ್ತದ ಮಿತಿಯ ಏರಿಕೆಯಿಂದ 20 ಲಕ್ಷ ರು. ಪಡೆದುಕೊಳ್ಳಲಿದ್ದಾರೆ.