Asianet Suvarna News Asianet Suvarna News

ತೊಡೆಗೆ ಗುಂಡು ಹಾರಿಸಿಕೊಂಡ ವಾಯುಪಡೆ ಉಪ ಮುಖ್ಯಸ್ಥ!

ವಾಯುಪಡೆ ಉಪ ಮುಖ್ಯಸ್ಥ ಶಿರಿಶ್ ಬಾಬನ್ ಡಿಯೋ! ಆಕಸ್ಮಿಕವಾಗಿ ಹಾರಿದ ಗುಂಡಿಗೆ ತೊಡೆ ಭಾಗಕ್ಕೆ ಗಾಯ! ಪಿಸ್ತೂಲು ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು! ನವದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾದ ಶಿರಿಶ್! ಶಿರಿಶ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದ ಆಸ್ಪತ್ರೆ

Air force Vice Chief Shirish Baban Deo  shoots himself in thigh
Author
Bengaluru, First Published Sep 27, 2018, 12:30 PM IST
  • Facebook
  • Twitter
  • Whatsapp

ನವದೆಹಲಿ(ಸೆ.27): ವಾಯುಪಡೆಯ ಉಪ ಮುಖ್ಯಸ್ಥ ಶಿರಿಶ್ ಬಾಬನ್ ಡಿಯೋ ತಮ್ಮ ಪಿಸ್ತೂಲ್ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಗಾಯಗೊಂಡಿದ್ದಾರೆ. ತೊಡೆಯ ಭಾಗಕ್ಕೆ ಗಂಭೀರ ಗಾಯವಾದ ಕಾರಣ ಡಿಯೋ ಅವರನ್ನುನವದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿರಿಶ್ ತಮ್ಮ ಪಿಸ್ತೂಲನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಪಿಸ್ತೂಲಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಗುಂಡು ನೇರವಾಗಿ ಶಿರಿಶ್ ಅವರ ತೊಡೆಗೆ ಹೊಕ್ಕಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ಕೂಡಲೇ ವಾಯುಪಡೆ ಸಿಬ್ಬಂದಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಶಿರಿಶ್ ಆರೋಗ್ಯ ಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಸೇನಾ ಆಸ್[ಪತ್ರೆ ಮೂಲಗಳು ತಿಳಿಸಿವೆ .

Follow Us:
Download App:
  • android
  • ios