ಯುವತಿ ಜತೆ ಏರ್’ಏಷ್ಯಾ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು (ನ.10): ಯುವತಿ ಜತೆ ಏರ್’ಏಷ್ಯಾ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಏರ್ ಏಷ್ಯಾ ವಿಮಾನ ಸಂ.1585 ನಲ್ಲಿ ರಾಂಚಿಯಿಂದ ಬೆಂಗಳೂರಿಗೆ ಬರುತ್ತಿದ್ದ ಯುವತಿಗೆ ಕಿರುಕುಳ ನೀಡಲಾಗಿದೆ. ಪ್ರಯಾಣದ ವೇಳೆ ಶೌಚಾಲಯ ಸ್ವಚ್ಛವಾಗಿಲ್ಲ ಎಂದು ಯುವತಿ ಹೇಳಿದ್ದರು. ಶೌಚಾಲಯ ಕ್ಲೀನ್ ಮಾಡುವಂತೆ ಸಿಬ್ಬಂದಿಗೆ ತಿಳಿಸಿದ್ದಳು. ಈ ವೇಳೆ ಸನ್ಮಿತ್ ಕರಾಂಡಿಕಾರ್‌ ನಾವು ಕ್ಲೀನ್ ಮಾಡ್ತೀವಿ ಹೋಗಿ ಕುಳಿತುಕೊಳ್ಳಿ ಎಂದಿದ್ದ. ಏಕೆ ನನಗೆ ಬೆದರಿಕೆ ಹಾಕ್ತೀರಿ ಎಂದು ಯುವತಿ ಪ್ರಶ್ನಿಸಿದಾಗ, ಇದು ನನ್ನ ಫ್ಲೈಟ್ ಹೇಗಾದ್ರೂ ವರ್ತಿಸ್ತೀನಿ ಇಲ್ಲಿ ನಾನು ಹೇಳಿದಂತೆ ಕೇಳಬೇಕು ಎಂದು ರಾಂಚಿಯಿಂದ ಹೈದರಾಬಾದ್‌ಗೆ ಬಂದಾಗ ಅಸಭ್ಯವಾಗಿ ವರ್ತಿಸಿದ್ದಾರೆ. ಬಲವಂತವಾಗಿ ಯುವತಿಯ ಫೋಟೋವನ್ನು ತೆಗೆದಿದ್ದಾರೆ. ಬಳಿಕ ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದ ಬಳಿಕ ಪ್ರಯಾಣಿಕರೆಲ್ಲಾ ಇಳಿದು ಹೋದ ಬಳಿಕ ಯುವತಿಯನ್ನು ಅಡ್ಡಗಟ್ಟಿ ಪಕ್ಕಕ್ಕೆ ಎಳೆದೊಯ್ದು ಕ್ಷಮೆ ಕೇಳುವಂತೆ ಸಿಬ್ಬಂದಿ ಒತ್ತಾಯಿಸಿದ್ದಾರೆ.

ಕಿರಿಕುಳ ನೀಡಿದ ಸನ್ಮಿತ್ ಕರಾಂಡಿಕಾರ್, ಕೈಜದ್ ಸುಂಟೋಕ್, ಹಾಗೂ ಜತಿನ್ ರವೀಂದ್ರನ್ ಮೂವರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೆಂಬರ್ 3ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.