ಬೆಂಗಳೂರು :  ಎಲ್ಲೆಲ್ಲೂ ಮಾನ್ಸೂನ್ ಆಫರ್‌ಗಳು. ವಿಮಾನಯಾನ ಸಂಸ್ಥೆಗಳೂ ಪ್ರಯಾಣದರದಲ್ಲಿ ಆಫರ್ ಘೋಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ಮೂಲಕ ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕೆಂಬ ಬಡವನ ಕನಸು ನನಸಾಗುವುದರಲ್ಲಿದೆ.

ಮಾನ್ಸೂನ್ ನೆವದಲ್ಲಿ ಲೇಟೆಸ್ಟ್ ಆಗಿ ರಿಯಾಯಿತಿ ಪ್ರಕಟಿಸಿದ್ದು ಏರ್ ಏಷ್ಯಾ. ಈ ಆಫರ್‌ನಡಿ ಡೊಮೆಸ್ಟಿಕ್ ವಿಮಾನಯಾನದ ಕನಿಷ್ಟ ದರ1399  ರು. ನಿಗದಿಯಾಗಿದೆ. 10 ಜೂನ್‌ವರೆಗೂ ಬುಕ್ಕಿಂಗ್‌ಗೆ ಅವಕಾಶವಿದೆ. ಬೆಂಗಳೂರು, ದೆಹಲಿ, ಕೋಲ್ಕತ್ತ ಸೇರಿದಂತೆ ಎಲ್ಲಾ ಮಹಾನಗರಗಳ ಯಾನಕ್ಕೂ ಈ ಆಫರ್ ಅನ್ವಯವಾಗಲಿದೆ. 

4 ಜೂನ್‌ನಿಂದ 30 ನವೆಂಬರ್‌ವರೆಗಿನ ಸಂಚಾರಕ್ಕೆ ಈ ರಿಯಾಯಿತಿಯನ್ನು ಪ್ರಕಟಿಸಿದೆ. ಈ ಆಫರ್‌ನಂತೆ ಬೆಂಗಳೂರಿನಿಂದ ಹೈದರಾಬಾದ್‌ಗೆ 1399 ರು.ಗಳಲ್ಲಿ ಪ್ರಯಾಣಿಸಬಹುದು. ಅದೇ ರೀತಿ ಕೊಚ್ಚಿನ್‌ನಿಂದ ಬೆಂಗಳೂರು, ಕೊಚ್ಚಿಯಿಂದ ಬೆಂಗಳೂರಿಗೂ ಇದೇ ದರವಿದೆ. ಕೇವಲ ಅಂತರ್‌ದೇಶೀಯ ಪ್ರಯಾಣ ಮಾತ್ರವಲ್ಲ, ಅಂತಾರಾಷ್ಟ್ರೀಯ ಹಾರಾಟಕ್ಕೂ ಈ ರಿಯಾಯಿತಿ ಅನ್ವಯವಾಗುತ್ತೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಏಷ್ಯನ್ ರಾಷ್ಟ್ರಗಳಿಗೂ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಬಹುದು. ಏರ್ ಏಷ್ಯಾ ಅಂತಾರಾಷ್ಟ್ರೀಯ ಹಾರಾಟಕ್ಕೆ 3999 ರು. ಕನಿಷ್ಟ ದರ ಘೋಷಿಸಿದೆ.

ನೆನಪಿಡಿ: ಈ ರಿಯಾಯಿತಿ ನಾಳೆಯವರೆಗೆ ಅಂದರೆ ಜೂ.10ರ ಒಳಗಿನ ಬುಕ್ಕಿಂಗ್‌ಗೆ ಮಾತ್ರ. ಅಂದಹಾಗೆ ಈ ಕಂಪೆನಿ 2017 ರ ಆರ್ಥಿಕ ವರ್ಷದಲ್ಲಿ ಸುಮಾರು 140 ಕೋಟಿ ರು. ನಷ್ಟದಲ್ಲಿತ್ತು. ಹೆಚ್ಚೆಚ್ಚು ಪ್ರಯಾಣಿಕರನ್ನು ಸೆಳೆಯುವ ತಂತ್ರಗಳಿಂದ ಈ ಬಾರಿ ಆ ನಷ್ಟದಿಂದ ಹೊರಬರಲು ಪ್ರಯತ್ನಿಸುತ್ತಿದೆ.