ಕಾಂಗ್ರೆಸ್ ವಿರುದ್ಧ ಅಸದುದ್ದೀನ್ ಒವೈಸಿ ಹೊಸ ಬಾಂಬ್! ರ‍್ಯಾಲಿ ನಡೆಸದಂತೆ ಒವೈಸಿಗೆ ಕಾಂಗ್ರೆಸ್ ನಿಂದ ಹಣದ ಆಮೀಷ! ಒವೈಸಿಗೆ 25 ಲಕ್ಷ ರೂ. ಆಫರ್ ನೀಡಿದ ಕಾಂಗ್ರೆಸ್ ಅಭ್ಯರ್ಥಿ! ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿತ್ತ ಒವೈಸಿ ಆರೋಪ
ಹೈದರಾಬಾದ್(ನ.20): ತೆಲಂಗಾಣದ ನಿರ್ಮಲ್‌ನಲ್ಲಿ ತಮ್ಮ ಪಕ್ಷದ ಚುನಾವಣಾ ಪ್ರಚಾರ ರ‍್ಯಾಲಿಯನ್ನು ರದ್ದುಗೊಳಿಸಲು ಕಾಂಗ್ರೆಸ್ 25 ಲಕ್ಷ ರೂ. ಆಫರ್ ಮಾಡಿತ್ತು ಎಂದು ಹೈದರಾಬಾದ್ ಸಂಸದ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಆರೋಪಿಸಿದ್ದಾರೆ.
ಆರೋಪಕ್ಕೆ ಸಾಕ್ಷಿಯಾಗಿ ಆಡಿಯೋ ಟೇಪ್ ತಮ್ಮ ಬಳಿ ಇದ್ದು, ಅಗತ್ಯ ಬಿದ್ದಲ್ಲಿ ಬಹಿರಂಗಪಡಿಸುವುದಾಗಿ ಒವೈಸಿ ಹೇಳಿದ್ದಾರೆ. ಆದರೆ 25 ಲಕ್ಷ ರೂ. ಆಫರ್ ಮಾಡಿರುವ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲು ಒವೈಸಿ ನಿರಾಕರಿಸಿದ್ದಾರೆ.
ಆದರೆ ತಮ್ಮ ಭಾಷಣದಲ್ಲಿ ಒವೈಸಿ ಈ ಕುರಿತು ಪ್ರಸ್ತಾಪ ಮಾಡುತ್ತಲೇ, ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಎ. ಮಹೇಶ್ವರ ರೆಡ್ಡಿ ಹೆಸರು ಕೂಗಿದ್ದಾರೆ.
ರ‍್ಯಾಲಿ ರದ್ದುಪಡಿಸುವಂತೆ ಹಣದ ಆಫರ್ ಮಾಡಿರುವ ಕಾಂಗ್ರೆಸ್ ನಡೆ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ಎಐಎಂಐಎಂ ಪಕ್ಷದ ವತಿಯಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿಯದಿದ್ದರೆ ಟಿಆರ್‌ಎಸ್‌ಗೆ ಬೆಂಬಲ ನೀಡುವ ನಿರ್ಧಾರ ಕುರಿತಂತೆ ಸಭೆ ನಡೆಸಿತ್ತು ಎನ್ನಲಾಗಿದೆ.
ಹೀಗಾಗಿ ಸಭೆ ನಡೆಸದಂತೆ ಮತ್ತು ಟಿಆರ್‌ಎಸ್‌ಗೆ ಬೆಂಬಲ ಸೂಚಿಸದಂತೆ ಕಾಂಗ್ರೆಸ್ ಒವೈಸಿಗೆ ಹಣದ ಆಮಿಷ ಒಡ್ಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
