ತಾವು ರಜೆಯ ಮೇಲಿದ್ದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿಲ್ಲ. ನಾಳೆಯೇ ನವದೆಹಲಿಗೆ ಹಾಜರಾಗಿ ಪಕ್ಷದ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ನವದೆಹಲಿ[ಅ.03]: ಎಐಸಿಸಿ ಸಾಮಾಜಿಕ ಮಾಧ್ಯಮ ಘಟಕದ ಮುಖ್ಯಸ್ಥ ಸ್ಥಾನದಿಂದ ಮಾಜಿ ಸಂಸದೆ ರಮ್ಯಾ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.
ಸೆ.29ಕ್ಕೆ ಅವರ ಅವಧಿ ಮುಕ್ತಾಯಗೊಂಡಿದ್ದು, ಎಐಸಿಸಿ ಹುದ್ದೆಯನ್ನು ನವೀಕರಿಸಬೇಕಾಗಿತ್ತು. ಇದಕ್ಕೆಲ್ಲ ಸ್ಪಷ್ಟನೆ ನೀಡಿರುವ ಅವರು, ತಾವು ರಜೆಯ ಮೇಲಿದ್ದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿಲ್ಲ. ನಾಳೆಯೇ ನವದೆಹಲಿಗೆ ಹಾಜರಾಗಿ ಪಕ್ಷದ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ತಮ್ಮ ಟ್ವಿಟರ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಇಂದು ಬೆಳಿಗ್ಗೆಯಿಂದ ತಮ್ಮ ಬಯೋಡೆಟಾ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿರುವ ಅವರು ಟ್ವಿಟರ್ ನಲ್ಲಿ ತಾಂತ್ರಿಕ ಸಮಸ್ಯೆಯುಂಟಾಗಿ ತನ್ನ ಬಯೋಡೆಟಾ ಕಾಣಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಲಖನೌ ವಕೀಲರಾದ ಸಯ್ಯದ್ ರಿಜ್ವಾನ್ ಅಹಮದ್ ಎಂಬುವವರು ಇತ್ತೀಚಿಗಷ್ಟೆ ರಮ್ಯಾ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು.
ಈ ಸುದ್ದಿಯನ್ನು ಓದಿ: ಮೋದಿಗೆ ನಿಂದನೆ : ರಮ್ಯಾ ವಿರುದ್ಧ ಕೇಸ್?
ಲೋಕಸಭೆಯಿಂದ ಸ್ಪರ್ಧೆ ?
ಕೆಲ ಮೂಲಗಳ ಪ್ರಕಾರ ರಮ್ಯಾ ರಾಜ್ಯ ರಾಜಕಾರಣಕ್ಕೆ ಮರಳುವ ಸಾಧ್ಯತೆಯಿದ್ದು, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ವಿರುದ್ಧ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ವದಂತಿ ಕೂಡ ಹರಿದಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕಿ ಮಾಹಿತಿ ನೀಡಿಲ್ಲ. ಇದು ಕೂಡ ವದಂತಿ ಎನ್ನಲಾಗಿದೆ.
