Asianet Suvarna News Asianet Suvarna News

ಮಗನ ಪುಂಡಾಡ - ಅಪ್ಪನಿಗೆ ಪೀಕಲಾಟ: ಎಂಎಲ್'ಎ ಟಿಕೆಟ್'ಗೆ ಕುತ್ತು ?

ಕೆಲವು ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮುಂಬರುವ ವಿಧಾನಸಭಾ ಚುನಾವಣಾ ಹಿನ್ನಲೆಯ ಕಾರಣದಿಂದ ರಾಜ್ಯದಾದ್ಯಂತ ಪ್ರವಾಸ ಕೈಕೊಂಡಿದ್ದಾರೆ. ರಾಲಿಯಲ್ಲಿ ಹಲ್ಲೆ ಪ್ರಸ್ತಾವಗಳು ಮುನ್ನಲೆಗೆ ಬರುವ ಸಾಧ್ಯತೆಯಿದೆ.

AICC Leaders Plan Action against NA Haris

ಬೆಂಗಳೂರು(ಫೆ.19): ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ತಮ್ಮ ಪುತ್ರನ ಪುಂಡಾಡಕ್ಕೆ ತಮ್ಮ ತಲೆದಂಡವಾಗುವ ಸಾಧ್ಯತೆ ಹೆಚ್ಚಾಗಿದೆ.

ಉದ್ಯಮಿಯೊಬ್ಬರ ಪುತ್ರನ ಮೇಲೆ ಹ್ಯಾರಿಸ್ ಮಗ ಹಲ್ಲೆ ನಡೆಸಿದ ಪ್ರಕರಣದಲ್ಲಿ ಶಾಸಕ ಹ್ಯಾರಿಸ್ ಮೇಲೆ ವರಿಷ್ಠರು ಕೆಂಗಣ್ಣು ಬೀರಿದ್ದು ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಟೆಕೆಟ್ ನೀಡಬಾರದೆಂದು ತೀರ್ಮಾನಿಸಿದ್ದಾರೆ ಎಂಬ ಮಾತು ಪಕ್ಷದ ಆಪ್ತ ವಲಯದಿಂದ ಕೇಳಿ ಬರುತ್ತಿದೆ.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಮೊಹಮದ್ ನಲಪಾಡ್ ಅವರನ್ನು ಪಕ್ಷದ ಯುವ ಕಾಂಗ್ರೆಸ್ ಹುದ್ದೆಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದಾರೆ. ನಲಪಾಡ್'ನ ಈ ರೀತಿಯ ಗೂಂಡ ಚಟುವಟಿಗೆ ಇದು ಮೊದಲೇನಲ್ಲ. ಕೆಲವು ಬಾರಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದರೂ ಶಾಸಕರ ಪುತ್ರನೆಂಬ ಕಾರಣದಿಂದ ದೂರು ದಾಖಲಿಸಿಕೊಂಡಿಲ್ಲ. ಯುವ ಕಾಂಗ್ರೆಸ್ ನಾಯಕರು ಈ ಬಗ್ಗೆ ಕೆ.ಸಿ. ವೇಣುಗೋಪಾಲ್ ಅವರಿಗೆ ದೂರು ನೀಡಿದ್ದಾರೆ.

ರಾಹುಲ್ ರಾಲಿ ಮೇಲೆ ಪರಿಣಾಮ

ಕೆಲವು ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮುಂಬರುವ ವಿಧಾನಸಭಾ ಚುನಾವಣಾ ಹಿನ್ನಲೆಯ ಕಾರಣದಿಂದ ರಾಜ್ಯದಾದ್ಯಂತ ಪ್ರವಾಸ ಕೈಕೊಂಡಿದ್ದಾರೆ. ರಾಲಿಯಲ್ಲಿ ಹಲ್ಲೆ ಪ್ರಸ್ತಾವಗಳು ಮುನ್ನಲೆಗೆ ಬರುವ ಸಾಧ್ಯತೆಯಿದೆ. ಆದ ಕಾರಣ ಶಿಸ್ತುಕ್ರಮವಾಗಿ ಟಿಕೆಟ್ ನೀಡದಿರುವುದೇ ಕ್ಷೇಮ ಎಂದು ರಾಜ್ಯ ಮುಖ್ಯ ನಾಯಕರಿಗೆ ರಾಷ್ಟ್ರೀಯ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಮಣಿಶಂಕರ್ ಅಯ್ಯರ್ ಅವರು ಮೋದಿಯ ಬಗ್ಗೆ ಕೆಟ್ಟ ಪದ ಬಳಸಿದ ಪರಿಣಾಮ ತಕ್ಷಣದಲ್ಲೆ ಪಕ್ಷದ ಪ್ರಮುಖ ಸ್ಥಾನದಿಂದ ಪದಚ್ಯತಗೊಳಿಸಲಾಗಿತ್ತು.

Follow Us:
Download App:
  • android
  • ios