ಚೆನ್ನೈ (ಸೆ.24): ಕಾವೇರಿ ಜಲವಿವಾದದ ವಿಚಾರದಲ್ಲಿ ತಮಿಳುನಾಡು ಸರ್ಕಾರ ಕೂಡಾ ವಿಶೇಷಾಧಿವೇಶನ ಕರೆಯಬೇಕೆಂದು ಡಿಎಂಕೆ ವರಿಷ್ಠ ಕರುಣಾನಿಧಿ ಬೇಡಿಕೆಯನ್ನು ಏಐಏಡಿಎಂಕೆ ತಳ್ಳಿ ಹಾಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾವೇರಿ ವಿಚಾರದಲ್ಲಿ ಅಮ್ಮ ಸಾಧಿಸಿರುವ ನಿರಂತರ ಗೆಲುವು ಕರ್ನಾಟಕ ಮಾತ್ರವಲ್ಲದೇ ಕರುಣಾನಿಧಿಯವರನ್ನು ಕೂಡಾ ರೊಚ್ಚಿಗೆಬ್ಬಿಸಿದೆ ಎಂದು ಎಐಎಡಿಎಂಕೆ ಮುಖವಾಣಿ 'ನಮಡು ಎಂಜಿಆರ್' ಬರೆದುಕೊಂಡಿದೆ.

ಸರ್ವಪಕ್ಷ ಸಭೆ, ವಿಶೇಷ ಅಧಿವೇಶನದಂತಹ ಅರ್ಥಹೀನ ಬೇಡಿಕೆಗಳನ್ನು ಮುಂದಿಡುವ ಮೂಲಕ ತಾನು ಕೂಡಾ ಕಾವೇರಿ ಹಾಗೂ ತಮಿಳು ಜನರ ಹಿತಾಸಕ್ತಿ ಬಗ್ಗೆ ಕಳಕಳಿ ಹೊಂದಿದ್ದೇನೆಂದು ಕರುಣಾನಿಧಿ ತೋರ್ಪಡಿಸಬಯಸುತ್ತಿದ್ದಾರೆ ಎಂದು ಏಐಏಡಿಎಂಕೆ ಹೇಳಿದೆ.

ಕಾವೇರಿ ವಿಚಾರದಲ್ಲಿ ಜಯಾಲಲಿತಾ 'ಶಾಶ್ವತ ಗೆಲುವಿ'ನೆಡೆಗೆ ದಾಪುಗಾಲಿಡುತ್ತಿದ್ದಾರೆ, ಅದನ್ನು ಕರುಣಾನಿಧಿಯವರಿಂದ ಸಹಿಸಿಕೊಳ್ಳಲಾಗುತ್ತಿಲ್ಲವೆಂದು ಏಐಏಡಿಎಂಕೆ ಹೇಳಿದೆ.