ಅಮ್ಮನ ಆಸೆಯಂತೆ ನಾವೆಲ್ಲರೂ ಒಂದಾಗುತ್ತಿದ್ದೇವೆ ಎಂದು ಹಣಕಾಸು ಸಚಿವ ಜಯಕುಮಾರ್​ ತಿಳಿಸಿದ್ದಾರೆ.

ಚೆನ್ನೈ(ಏ.18): ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಿದ್ದು, ಸದ್ಯ ಬೆಂಗಳೂರಿನ ಸೆರೆಮನೆಯಲ್ಲಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹಾಗೂ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ. ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಎಲ್ಲರೂ ಒಂದಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ಎಐಎಡಿಎಂಕೆಯ ಎಲ್ಲಾ 123 ಶಾಸಕರು ಒಗ್ಗಟ್ಟಾಗಿದ್ದೇವೆ. ಎಲ್ಲರೂ ಒಂದಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ಎಐಎಡಿಎಂಕೆ ಪಕ್ಷ ಇಬ್ಭಾಗವಾಗುವುದು ನಮಗೆ ಇಷ್ಟವಿಲ್ಲ. ನಮಗೆ ಎರಡೆಲೆ ಚಿಹ್ನೆ ಬೇಕು. ಅಮ್ಮನ ಆಸೆಯಂತೆ ನಾವೆಲ್ಲರೂ ಒಂದಾಗುತ್ತಿದ್ದೇವೆ ಎಂದು ಹಣಕಾಸು ಸಚಿವ ಜಯಕುಮಾರ್​ ತಿಳಿಸಿದ್ದಾರೆ.

ಸಭೆಯಲ್ಲಿ ಎರಡು ಬಣಗಳ ವಿಲೀನ ಸೂತ್ರ ಸಿದ್ಧವಾಗಿದ್ದು ಪನ್ನೀರ್ ಸೆಲ್ವಂ ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಹೆಚ್ಚಿದೆ. ಸಿಎಂ ಸ್ಥಾನ ನೀಡದಿದ್ದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.