ಪಕ್ಷದ ಎರಡೆಲೆ ಚಿಹ್ನೆ ಉಳಿಸಿಕೊಳ್ಳಲು ಲಂಚ ನೀಡಿದ ಆರೋಪದಡಿ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ದಿನಕರನ್ ವಿರುದ್ಧ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಕ್ಷದ ಚಿಹ್ನೆಗಾಗಿ ಲಂಚ ನೀಡಿದ ಆರೋಪವನ್ನ ದಿನಕರನ್ ವಿರುದ್ಧ ಪೊಲೀಸರು ಹೊರಿಸಿದ್ದಾರೆ. ಮಧ್ಯವರ್ತಿಯಾಗಿದ್ದ ಸುಖೇಶ್'ನನ್ನ ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನವದೆಹಲಿ(ಏ.17): ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊತ್ತು ಜೈಲುಪಾಲಾಗಿರುವ ಶಶಿಕಲಾ ಸಂಬಂಧಿ ದಿನಕರನ್ ವಿರುದ್ಧ ದೆಹಲಿ ಪೊಲೀಸರು ಎಫ್'ಐ'ಆರ್ ದಾಖಲಿಸಿದ್ದಾರೆ.
ಪಕ್ಷದ ಎರಡೆಲೆ ಚಿಹ್ನೆ ಉಳಿಸಿಕೊಳ್ಳಲು ಲಂಚ ನೀಡಿದ ಆರೋಪದಡಿ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ದಿನಕರನ್ ವಿರುದ್ಧ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಕ್ಷದ ಚಿಹ್ನೆಗಾಗಿ ಲಂಚ ನೀಡಿದ ಆರೋಪವನ್ನ ದಿನಕರನ್ ವಿರುದ್ಧ ಪೊಲೀಸರು ಹೊರಿಸಿದ್ದಾರೆ. ಮಧ್ಯವರ್ತಿಯಾಗಿದ್ದ ಸುಖೇಶ್'ನನ್ನ ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದೆಹಲಿಯ ಹೋಟೆಲ್ವೊಂದರಲ್ಲಿ ಸುಖೇಶ್ ತಂಗಿದ್ದಾಗ ಪೊಲೀಸರು ರೇಡ್ ಮಾಡಿ 1.3 ಕೋಟಿ ಹಣವನ್ನ ವಶಪಡಿಸಿಕೊಂಡಿದ್ದಾರೆ. ಜತೆಗೆ 2 ಐಷರಾಮಿ ಕಾರ್'ಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಬಳಿಕ ಟಿಟಿವಿ ದಿನಕರನ್ಗೆ ಸಮನ್ಸ್ ಜಾರಿ ಮಾಡಿರುವ ದೆಹಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇನ್ನು ತಮ್ಮ ವಿರುದ್ಧದ ಆರೋಪವನ್ನು ಧಿನಕರ್ನ ತಳ್ಳಿಹಾಕಿದ್ದಾರೆ. ಪಕ್ಷದ ಚಿಹ್ನೆಗಾಗಿ ನಾನು ಯಾರಿಗೂ ಹಣ ಕೊಟ್ಟಿಲ್ಲ. ಬಂಧಿತ ಮನೋಜ್ ಯಾರು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.