ಡಿ. ಕೆ ಶಿವಕುಮಾರ್ ಗುಜರಾತ್ ಕಾಂಗ್ರೆಸ್ ಶಾಸಕರ ವಾಸ್ತವ್ಯದ ಹೊಣೆ ಹೊತ್ತಿದ್ದರು. ಈ ಕಾರಣದಿಂದಲೇ ಡಿ. ಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂಬ ಮಾತುಗಳು ದಾಳಿಯ ಬಳಿಕ ಕೇಳಿ ಬರುತ್ತಿವೆ. ಕಾಂಗ್ರೆಸ್ ಕೂಡಾ ಇದು ರಾಜಕೀಯ ಪ್ರೇರಿತ ದಾಳಿ ಎಂಬ ಹೇಳಿಕೆ ನೀಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಆದಾಯ ಿಲಾಖೆ ಅಧಿಕಾರಿಗಳ ದಾಳಿ ಕುರಿತಾಗಿ ಟ್ವೀಟ್ ಮಾಡಿರುವ ರಾಜ್ಯಸಭಾ ಚುನಾವಣಾ ಸ್ಪರ್ಧಿಯಾಗಿರುವ ಅಹ್ಮದ್ ಪಟೇಲ್
ಬೆಂಗಳೂರು(ಆ.02): ಕಾಂಗ್ರೆಸ್'ನ ಪ್ರಭಾವಿ ಮುಖಂಡ, ಇಂಧನ ಸಚಿವ ಡಿ. ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಈ ಐಟಿ ದಾಳಿ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿದೆ. ಡಿಕೆಶಿ ಅವರ ಮನೆಗಳು ಹಾಗೂ ಅವರ ಸಂಬಂಧಿಕರು ಮತ್ತು ಆಪ್ತರ ಮೇಲೂ ಐಟಿ ರೇಡ್ ಆಗಿದೆ.
ಡಿ. ಕೆ ಶಿವಕುಮಾರ್ ಗುಜರಾತ್ ಕಾಂಗ್ರೆಸ್ ಶಾಸಕರ ವಾಸ್ತವ್ಯದ ಹೊಣೆ ಹೊತ್ತಿದ್ದರು. ಈ ಕಾರಣದಿಂದಲೇ ಡಿ. ಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂಬ ಮಾತುಗಳು ದಾಳಿಯ ಬಳಿಕ ಕೇಳಿ ಬರುತ್ತಿವೆ. ಕಾಂಗ್ರೆಸ್ ಕೂಡಾ ಇದು ರಾಜಕೀಯ ಪ್ರೇರಿತ ದಾಳಿ ಎಂಬ ಹೇಳಿಕೆ ನೀಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಆದಾಯ ಿಲಾಖೆ ಅಧಿಕಾರಿಗಳ ದಾಳಿ ಕುರಿತಾಗಿ ಟ್ವೀಟ್ ಮಾಡಿರುವ ರಾಜ್ಯಸಭಾ ಚುನಾವಣಾ ಸ್ಪರ್ಧಿಯಾಗಿರುವ ಅಹ್ಮದ್ ಪಟೇಲ್
'ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಬಿಜೆಪಿ ದ್ವೇಷ ರಾಜಕಾರಣ ನಡೆಸುತ್ತಿದೆ. ಐಟಿ ದಾಳಿ ಗಮನಿಸಿದ್ರೆ ಬಿಜೆಪಿಯ ಹತಾಶೆ ಎದ್ದು ಕಾಣುತ್ತಿದೆ. ಕೇವಲ ಒಂದೇ ಒಂದು ರಾಜ್ಯಸಭಾ ಸೀಟು ಗೆಲ್ಲಲು ಇಷ್ಟೊಂದು ದುಸ್ಸಾಹಸ ನಡೆಸುತ್ತಿದೆ' ಎಂದು ಕಾಂಗ್ರೆಸ್ ಮುಖಂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆಶಿ ಮನೆ ಮೇಲೆ ಐಟಿ ದಾಳಿ ವಿಚಾರ ತಿಳಿಯುತ್ತಿದ್ದಂತೆಯೇ ಸಿಎಂ ಸಿದ್ಧರಾಮಯ್ಯಗೆ ಕರೆ ಮಾಡಿದ ಅಹ್ಮದ್ ಪಟೇಲ್ 'ಡೋಂಟ್ ವರಿ' ಎಂದಿದ್ದಾರೆ. ಅಹ್ಮದ್ ಪಟೇಲ್'ರೊಂದಿಗೆ ಸುಮಾರು 10 ನಿಮಿಷಗಳ ಕಾಲ ನಡೆದ ಈ ಮಾತುಕತೆಯ ಸಂದರ್ಭದಲ್ಲಿ ಕೇಂದ್ರದ ನಡೆ ಬಗ್ಗೆ ಸಿಎಂ ಗರಂ ಆಗಿದ್ದರು ಎಂದು ತಿಳಿದು ಬಂದಿದೆ.