ಏ.23 ರಂದು ನಡೆಯಲಿರುವ ಎಂಸಿಡಿ (ಮುನಿಸಿಪಲ್ ಕಾರ್ಪೋರೇಶನ್ ಆಫ್ ಡೆಲ್ಲಿ) ಚುನಾವಣಾ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿದ್ದಾರೆನ್ನುವ ಆರೋಪದಡಿ ಐವರು ಹಾಲಿ ಕೌನ್ಸಲರ್ ಸೇರಿದಂತೆ 21 ಮಂದಿ ಸದಸ್ಯರನ್ನು ದೆಹಲಿ ಬಿಜೆಪಿ ಇಂದು ಉಚ್ಚಾಟಿಸಿದೆ.
ನವದೆಹಲಿ (ಏ.15): ಏ.23 ರಂದು ನಡೆಯಲಿರುವ ಎಂಸಿಡಿ (ಮುನಿಸಿಪಲ್ ಕಾರ್ಪೋರೇಶನ್ ಆಫ್ ಡೆಲ್ಲಿ) ಚುನಾವಣಾ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿದ್ದಾರೆನ್ನುವ ಆರೋಪದಡಿ ಐವರು ಹಾಲಿ ಕೌನ್ಸಲರ್ ಸೇರಿದಂತೆ 21 ಮಂದಿ ಸದಸ್ಯರನ್ನು ದೆಹಲಿ ಬಿಜೆಪಿ ಇಂದು ಉಚ್ಚಾಟಿಸಿದೆ.
ರಾನ್ ಹೋಲಾ ಕೌನ್ಸಲರ್ ಡಾ. ಪಂಕಜ್ ಸಿಂಗ್, ನಾವಡಾ ಕೌನ್ಸಲರ್ ಕೃಷ್ಣ ಗೆಹಲಾಟ್, ಸಾಗರ್ ಪುರ್ (ವೆಸ್ಟ್) ಕೌನ್ಸಲರ್ ಪ್ರವೀಣ್ ರಜಪೂತ್, ನ್ಯೂ ಅಶೋಕ್ ನಗರದಿಂದ ಸಂಧ್ಯಾ ವರ್ಮಾರನ್ನು ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಹೇಳಿದೆ.
ಅದೇ ರೀತಿ ಬಿಜೆಪಿ ಮುಖಂಡ ಹಾಗೂ ದೆಹಲಿ ಯೂನಿವರ್ಸಿಟಿ ಸ್ಟುಡೆಂಟ್ ಯೂನಿಯನ್ ಮಾಜಿ ಅಧ್ಯಕ್ಷ ಮನೋಜ್ ಚೌಧರಿಯನ್ನೂ ಸಹ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಉಚ್ಚಾಟಿಸಲಾಗಿದೆ.
